ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತತ ಆರನೇ ದಿನವೂ ಸುಶಾಂತ್ ಫ್ಲಾಟ್ ಮೇಟ್ ಸಿದ್ದಾರ್ಥ್ ಪಿಥಾನಿ ವಿಚಾರಣೆಯನ್ನು ಸಿಬಿಐ ಪೊಲೀಸರು ಮುಂದುವರೆಸಿದ್ದಾರೆ.
ಪಿಥಾನಿ ಮಾತ್ರವಲ್ಲದೇ, ರೆರ್ಸಾಟ್ವೊಂದರ ಮ್ಯಾನೇಜರ್ ಕೂಡ ಸುಶಾಂತ್ ತಂಗಿದ್ದ ಸ್ಯಾಂಟಕ್ರೂಜ್ ಕಲೀನಾದ ಡಿಆರ್‌ಡಿಒ ಗೆಸ್ಟ್ ಹೌಸ್ಗೆ ಭೇಟಿ ನೀಡಿದ್ದ ಎನ್ನಲಾಗ್ತಿದೆ. ಹಾಗಾಗಿ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಇನ್ನು, ಸುಶಾಂತ್ ತಂಗಿದ್ದ ಗೆಸ್ಟ್ ಹೌಸ್ಗೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ಆಗಮಿಸಿದ್ದ ಪಿಥಾನಿ, 12 ಗಂಟೆಗಳ ನಂತರ, ಅಂದರೆ ರಾತ್ರಿ 11 ರ ವೇಳೆಗೆ ವಾಪಸ್ ಹೋಗಿದ್ದ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಜೂನ್ 8 ರಂದು ಸುಶಾಂತ್ ಮನೆಗೆ ಭೇಟಿ ನೀಡಿದ್ದ ರಿಯಾ ಚಕ್ರವರ್ತಿ ವಾಪಸ್ ಹೋಗುವ ವೇಳೆಗೆ ಎಂಟು ಹಾರ್ಡ್ ಡ್ರೈವ್ಗಳ ಡೇಟಾ ನಾಶವಾಗಿದೆ. ಸುಶಾಂತ್ ಮನೆಯಲ್ಲಿದ್ದ ಹಾರ್ಡ್ ಡ್ರೈವ್ಗಳ ಡೇಟಾ ಅಳಿಸಲು ಐಟಿ ತಂತ್ರಜ್ಞರನ್ನು ಕರೆಸಲಾಗಿತ್ತು ಎಂದು ಪಿಥಾನಿ ಪೊಲೀಸರ ಮುಂದೆ ಹೇಳಿದ್ದಾನೆ.
ಜೂನ್ 14 ರಂದು 34 ವರ್ಷದ ನಟ ಸುಶಾಂತ್ ಸಿಂಗ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬಾಂದ್ರಾದ ಮಾಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್‌ನ ಕೋಣೆಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಮೃತಪಟ್ಟ ವೇಳೆ ಮನೆಯಲ್ಲಿ, ಪಿಥಾನಿ, ಸುಶಾಂತ್ ಮನೆಯ ಅಡುಗೆಯವ ನೀರಜ್ ಸಿಂಗ್ ಮತ್ತು ಸಹಾಯ ದೀಪೇಶ್ ಸಾವಂತ್ ಇದ್ದರು.
-
Why are we still waiting to take the criminals under custody?? #ArrestCulpritsOfSSR #JusticeForSushant pic.twitter.com/yGkXRHu24R
— shweta singh kirti (@shwetasinghkirt) August 26, 2020 " class="align-text-top noRightClick twitterSection" data="
">Why are we still waiting to take the criminals under custody?? #ArrestCulpritsOfSSR #JusticeForSushant pic.twitter.com/yGkXRHu24R
— shweta singh kirti (@shwetasinghkirt) August 26, 2020Why are we still waiting to take the criminals under custody?? #ArrestCulpritsOfSSR #JusticeForSushant pic.twitter.com/yGkXRHu24R
— shweta singh kirti (@shwetasinghkirt) August 26, 2020
ಬುಧವಾರ ಬಾಂದ್ರಾ ಪೊಲೀಸರ ತಂಡ, ಸುಶಾಂತ್ ಕೆಲ ಸಮಯ ತಂಗಿದ್ದ ಡಿಆರ್‌ಡಿಒ ಅತಿಥಿ ಗೃಹಕ್ಕೆ ಭೇಟಿ ನೀಡಿ ಒಂದು ಗಂಟೆಗಳ ಕಾಲ ಪರೀಶಿಲನೆ ನಡೆಸಿದ್ದಾರೆ. ಅದೇ ಸಮಯದಲ್ಲಿ, ಕೇಂದ್ರ ತನಿಖಾ ತಂಡದ ಮತ್ತೊಂದು ತಂಡ ನಗರದ ಸರ್ಕಾರಿ ಕೂಪರ್ ಆಸ್ಪತ್ರೆಗೆ ಭೇಟಿ ನೀಡಿದೆ. ಅಲ್ಲಿ ಸುಶಾಂತ್ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಈ ಮಧ್ಯೆ ಸಿಬಿಐ ಅಧಿಕಾರಿಗಳು ಪಿಥಾನಿ ಮತ್ತು ನೀರಜ್ ಸಿಂಗ್ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಜೂನ್ 14 ರಂದು ನಡೆದ ಘಟನೆಯ ಮರುಸೃಷ್ಟಿಗಾಗಿ ಸಿಬಿಐ ತಂಡ ಪಿಥಾನಿ, ನೀರಜ್ ಮತ್ತು ಸಾವಂತ್ನ್ನು ಸುಶಾಂತ್ ತಂಗಿದ್ದ ಫ್ಲಾಟ್ಗೆ ಕರೆದೊಯ್ದಿದೆ. ಜೊತೆಗೆ ಸುಶಾಂತ್ ಕೆಲ ಸಮಯ ತಂಗಿದ್ದ ಅಂಧೇರಿಯ ವಾಟರ್ ಸ್ಟೋನ್ ರೆಸಾರ್ಟ್‌ನ ಮ್ಯಾನೇಜರ್ ಅವರನ್ನ ಸಿಬಿಐ ವಿಚಾರಣೆಗೆ ಕರೆಸಿಕೊಂಡಿದೆ.
ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಮತ್ತು ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಸುಶಾಂತ್ ತಂದೆ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಕಳೆದ ವಾರ ಸುಪ್ರೀಂಕೋರ್ಟ್ ಸಿಬಿಐಗೆ ವರ್ಗಾಯಿಸಿತ್ತು.