ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮುಂಬರುವ ಪಠಾಣ್ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಮಲ್ಲೋರ್ಕಾಗೆ ಹಾರಿದ್ದಾರೆ. ಮಲ್ಲೋರ್ಕಾ ಯುರೋಪ್ ಖಂಡದ ಒಂದು ಸುಂದರ ದ್ವೀಪ. ಪ್ರವಾಸಿಗರ ಹಾಟ್ ಸ್ಪಾಟ್.. ಇಂತಹ ಸುಂದರ ತಾಣದಲ್ಲಿ ಚಿತ್ರೀಕರಣಕ್ಕಾಗಿ ತಂಡ ಮಲ್ಲೋರ್ಕಾಗೆ ಪಯಣ ಬೆಳೆಸಿದೆ.
ಸಿದ್ಧಾರ್ಥ ಆನಂದ್ ಅವರು ಪಠಾಣ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಇದುವರೆಗೂ ಯಾರು ಮಾಡಿದರದಂತಹ ಹಾಡಿನ ಚಿತ್ರೀಕರಣ ಮಾಡುವ ಗುರಿ ಹೊಂದಿದ್ದಾರೆ. ಇವರಿಗೆ ಯಶ್ ರಾಜ್ ಫಿಲ್ಮ್ ಸಹಕಾರ ನೀಡಿದೆ. ಅ.07 ರಂದು ಪಠಾಣ್ ಚಿತ್ರತಂಡ ಸ್ಪೇನ್‌ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿರುವ ಕ್ಯಾಡಿಜ್ ಮತ್ತು ವೆಜರ್ ಡಿ ಲಾ ಫ್ರಾಂಟೆರಾನಂತಹ ಭವ್ಯವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದೆ.
ಇದುವರೆಗೆ ಬಾಲಿವುಡ್ನಲ್ಲಿ ಯಾರು ಕೂಡ ಈ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿಲ್ಲ. ಮೊದಲ ಬಾರಿಗೆ ನಿರ್ದೇಶಕ ಸಿದ್ಧಾರ್ಥ ನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ದುಬಾರಿ ಹಾಗೂ ವೈಭವದ ಸ್ಥಳಗಳನ್ನು ನೋಡುವ ಭಾಗ್ಯ ಪ್ರೇಕ್ಷಕರಿಗೆ ಸಿಗಲಿದೆ. ಅಷ್ಟೇ ಅಲ್ಲದೆ ಈ ಹಾಡಿನಲ್ಲಿ ಶಾರುಖ್ ಮತ್ತು ದೀಪಿಕಾ ಹಿಂದೆಂದೂ ಕಾಣದ ರೀತಿಯಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.