ಮುಂಬೈ: ಬಾಲಿವುಡ್ ನಟ ಸೂರಜ್ ಪಾಂಚೋಲಿ ಅವರು ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಗೆ ವಿದಾಯ ಹೇಳಿದ್ದಾರೆ.
ಸೀ ಯೂ ಇನ್ಸ್ಟಾಗ್ರಾಂ ಎಂದು ಬರೆದುಕೊಂಡಿರುವ ಸೂರಜ್ ಪಾಂಚೋಲಿ, ಜಗತ್ತು ಉತ್ತಮ ಸ್ಥಳದಲ್ಲಿದ್ದರೆ ಮುಂದೊಂದಿನ ಯಾವತ್ತಾದರೂ ನಿನ್ನನ್ನು ಮತ್ತೆ ನೋಡುವುದಾಗಿ ತಿಳಿಸಿದ್ದಾರೆ. ಅಲ್ಲದೇ 28ನೇ ಹುಟ್ಟುಹಬ್ಬದ ನವೆಂಬರ್ 9, 2018 ರಂದು ಪೋಸ್ಟ್ ಮಾಡಿದ್ದನ್ನು ಹೊರತುಪಡಿಸಿ ಅವರ ಎಲ್ಲಾ ಇನ್ಸ್ಟಾಗ್ರಾಂ ಪೋಸ್ಟ್‌ಗಳನ್ನು ಸೂರಜ್ ಇಂದು ಅಳಿಸಿ ಹಾಕುವ ಮೂಲಕ ಅದಕ್ಕೆ ಬೈ ಹೇಳಿದ್ದಾರೆ.
ನಟ ಸುಶಾಂತ ಸಿಂಗ್ ರಾಜಪೂತ್ ಹಾಗೂ ಅವರ ಮ್ಯಾನೇಜರ್ ದಿಶಾ ಸಾವಿನ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಹಲವು ಊಹಾಪೋಹಗಳಿಗೆ ಉತ್ತರ ಸಹ ನೀಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ಅನೇಕ ವದಂತಿಗಳಿಂದ ಬೇಸತ್ತಿದ್ದರು. ಇದರಿಂದಲೇ ಇಂದು ಇನ್ಸ್ಟಾಗ್ರಾಂ ಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.