ಬಾಲಿವುಡ್ ಹಿರಿಯ ನಟಿ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ , ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಉದ್ಯಮಿ ಆನಂದ್ ಅಹುಜಾ ಅವರನ್ನು 2018 ರಲ್ಲಿ ಮದುವೆಯಾಗಿದ್ದರು. ಇದೀಗ ಪತಿ ಆನಂದ್ ಜೊತೆ ಸೋನಂ ಲಂಡನ್ನಲ್ಲಿ ನೆಲೆಸಿದ್ದಾರೆ.
ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಸೋನಂ ಕಪೂರ್ ಇನ್ಸ್ಟಾಗ್ರಾಮ್ ಸ್ಟೇಟಸ್ವೊಂದಕ್ಕೆ ಕಮೆಂಟ್ ಮಾಡಿ, ನೀನು ಈ ಸಂದೇಶ ಓದುವುದಿಲ್ಲ ಎಂದು ನನಗೆ ಗೊತ್ತು. " ಫಾಲೋವರ್ಸ್ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದೀಯ. ಸಮಾಜದಲ್ಲಿ ಪ್ರೀತಿಯನ್ನು ಹಂಚು, ದ್ವೇಷವನ್ನಲ್ಲ, ನಿನ್ನ ತಂದೆಯಿಂದ ನಿನಗೆ ಸ್ವಲ್ಪ ಹೆಸರಿದೆ. ಆತ ಇಲ್ಲದಿದ್ದರೆ ನೀನು ಶೂನ್ಯ. ನಿನಗೆ ಸ್ವಲ್ಪವೂ ಆ್ಯಕ್ಟಿಂಗ್ ಬರುವುದಿಲ್ಲ. ಅಷ್ಟೇ ಅಲ್ಲ, ನಿನ್ನ ಪತಿ ಸುಂದರ ಎಂದು ನೀನು ಅಂದುಕೊಂಡಿದ್ದೀಯ, ಆದರೆ ಆತ ಸ್ವಲ್ಪವೂ ಚೆನ್ನಾಗಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಸೋನಂ, "ನನ್ನ ಗಮನವನ್ನು ನಿನ್ನತ್ತ ಕೇಂದ್ರೀಕರಿಸುವ ಉದ್ದೇಶದಿಂದ ಈ ರೀತಿ ಕಮೆಂಟ್ ಮಾಡಿದ್ದೀರಿ. ಹೀಗೆ ಮಾತನಾಡಿದರೆ ನಿಮಗೆ ನಾನು ಉತ್ತರಿಸುವ ಮೂಲಕ ಟ್ಯಾಗ್ ಮಾಡಿದರೆ ಆಗ ನಿಮ್ಮ ಫಾಲೋವರ್ಸ್ಗಳು ಹೆಚ್ಚುತ್ತಾರೆ. ಕೇವಲ ಫಾಲೋವರ್ಸ್ಗಳನ್ನು ಹೆಚ್ಚಿಸಿಕೊಳ್ಳಲು ನನಗೆ ಈ ರೀತಿ ಕಮೆಂಟ್ ಮಾಡಿದ್ದೀರಿ" ಎಂದು ಸೋನಂ ಪ್ರತಿಕ್ರಿಯಿಸಿದ್ದಾರೆ. ಸೋನಂ ಹೀಗೆ ಪ್ರತಿಕ್ರಿಯಿಸಿದ ಕೆಲವು ದಿನಗಳ ನಂತರ ಆ ಮಹಿಳೆ ಮತ್ತೆ ಕಮೆಂಟ್ ಮಾಡಿ ನನ್ನ ಖಾತೆ ಹ್ಯಾಕ್ ಆಗಿದೆ, ಈಗಷ್ಟೇ ಸರಿಹೋಗಿದೆ. ನಾನು ಉದ್ದೇಶಪೂರ್ವಕವಾಗಿ ಯಾರಿಗೂ ಈ ರೀತಿ ಸಂದೇಶ ರವಾನಿಸುವುದಿಲ್ಲ. ಇದೆಲ್ಲಾ ಹ್ಯಾಕರ್ಗಳ ಕೆಲಸ ಎಂದು ಜಾರಿಕೊಳ್ಳಲು ಯತ್ನಿಸಿದ್ದಾರೆ.