ETV Bharat / sitara

ಸಂಜಯ್​ ಲೀಲಾ ಬನ್ಸಾಲಿ ಚಿತ್ರದಲ್ಲಿ ಸಲ್ಮಾನ್ ಖಾನ್ ಬದಲಿಗೆ ಶಾರುಖ್ ಖಾನ್​​​...? - Bollywood actress Alia bhat

2 ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಇನ್ಶಾಲ್ಹ' ಚಿತ್ರದಲ್ಲಿ ಸಲ್ಮಾನ್ ಖಾನ್ ಜಾಗಕ್ಕೆ ಶಾರುಖ್ ಖಾನ್ ಅವರನ್ನು ಕರೆತರಲಾಗಿದೆ ಎನ್ನಲಾಗಿದೆ. ಅಭಿಮಾನಿಗಳು ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

Inshallah
'ಇನ್ಶಾಲ್ಹ'
author img

By

Published : Feb 1, 2021, 5:01 PM IST

ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ 'ಇನ್ಶಾಲ್ಹ' ಸಿನಿಮಾ ಸೆಟ್ಟೇರಿ 2 ವರ್ಷಗಳಾದರೂ ಸಿನಿಮಾ ಮುಂದುವರೆಯುವ ಯಾವುದೇ ಲಕ್ಷಣಗಳು ಇರಲಿಲ್ಲ. ಚಿತ್ರವನ್ನು ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಹೇಳಿದ್ದರು. ಆದರೆ ಇದೀಗ ಈ ಸಿನಿಮಾ ಆರಂಭವಾಗುವ ಎಲ್ಲಾ ಮುನ್ಸೂಚನೆಗಳಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬುರ್ಜ್​​​​​ ಖಲೀಫಾದಲ್ಲಿ ವಿಷ್ಣು ಸಾಂಗ್​ ಹಾಡಿದ ಕಿಚ್ಚ!

ಆದರೆ ಚಿತ್ರದಲ್ಲಿ ಸಲ್ಮಾನ್ ಖಾನ್ ಬದಲಿಗೆ ಶಾರುಖ್ ಖಾನ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಿಂದ ಸಲ್ಮಾನ್ ಖಾನ್ ಹೊರ ಹೋದ ನಂತರ ಆಲಿಯಾ ಭಟ್ ಹಾಗೂ ಬೇರೆ ನಟನೊಂದಿಗೆ ಈ ಸಿನಿಮಾ ಮಾಡುವುದಾಗಿ ಸಂಜಯ್ ಲೀಲಾ ಬನ್ಸಾಲಿ ಪ್ಲ್ಯಾನ್ ಮಾಡಿದ್ದು ಈಗ ಸಲ್ಲುಭಾಯ್ ಜಾಗಕ್ಕೆ ಶಾರುಖ್ ಖಾನ್ ಬರಲಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಲವ್ ಸ್ಟೋರಿಯಾಗಿದ್ದು ಈ ಪಾತ್ರಕ್ಕೆ ಶಾರುಖ್ ಖಾನ್ ಬಹಳ ಚೆನ್ನಾಗಿ ಹೊಂದುತ್ತಾರೆ ಎಂಬ ಕಾರಣದಿಂದ ಸಂಜಯ್ ಲೀಲಾ ಬನ್ಸಾಲಿ ಎಸ್​​​ಆರ್​​ಕೆಯನ್ನು ಕರೆತರಲು ನಿರ್ಧರಿದ್ದಾರೆ ಎನ್ನಲಾಗಿದೆ. ಈಗಾಗಲೇ 'ಡಿಯರ್ ಜಿಂದಗಿ' ಚಿತ್ರದಲ್ಲಿ ಪ್ರೇಕ್ಷಕರು ಶಾರುಖ್ ಹಾಗೂ ಆಲಿಯಾ ಭಟ್ ಕಾಂಬಿನೇಷನ್​​​​​​ಗೆ ಫಿದಾ ಆಗಿದ್ದಾರೆ. ಇದೀಗ ಮತ್ತೆ ಈ ಜೋಡಿ ಇನ್ಶಾಲ್ಹ ಚಿತ್ರದಲ್ಲಿ ಜೊತೆಯಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.