ETV Bharat / sitara

ಕೈರಾ ಜತೆ ಕುಚ್​ - ​ಕುಚ್...ನಟ ಸಿದ್ಧಾರ್ಥ್ ಹೇಳಿದ್ದೇನು ? - ಕೈರಾ ಅಡ್ವಾಣಿ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕೈರಾ ಅಡ್ವಾಣಿ ನಡುವೆ ಕುಚ್​-​ಕುಚ್​​ ನಡೀತಾ ಎಂಬುದು ಬಿಟೌನ್ ಮಂದಿಯ ಮಾತು. ಈ ಬಗ್ಗೆ ಸಿದ್ಧಾರ್ಥ್​ ಈಗ ಮೌನ ಮುರಿದಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 2, 2019, 5:42 PM IST

ನಟಿ ಕೈರಾ ಅಡ್ವಾಣಿ ಜತೆ ಡೇಟಿಂಗ್ ರೂಮರ್​​ ಬಗ್ಗೆ ಬಾಲಿವುಡ್​ ಹ್ಯಾಂಡ್​​ಸಮ್​ಗಾಯ್​ ಸಿದ್ಧಾರ್ಥ್ ಮಲ್ಹೋತ್ರಾ ಕೊನೆಗೂ ಮೌನ ಮುರಿದಿದ್ದಾರೆ.

ಈ ಮೊದಲು ಸಿದ್ಧಾರ್ಥ್ ಹೆಸರು ಆಲಿಯಾ ಭಟ್​ ಜತೆ ಲಿಂಕ್ ಆಗಿತ್ತು. ಈ ತಾರೆಯರಿಬ್ಬರು ಡೇಟಿಂಗ್​​ನಲ್ಲಿದ್ದಾರೆ ಎನ್ನುವ ಗುಸು-ಗುಸು ದಟ್ಟವಾಗಿಯೇ ಕೇಳಿಬಂದಿತ್ತು. ಆದರೆ,ಇತ್ತೀಚಿಗೆ ಕೈರಾ ಅಡ್ವಾಣಿ ಜತೆ ಈ ನಟನ ಹೆಸರು ಸೇರಿಕೊಂಡಿತು. ಕಬೀರ್ ಸಿಂಗ್ ಚೆಲುವೆ ಕೈರಾ ಜತೆ ಸಿದ್ಧಾರ್ಥ್​ ರಿಲೇಷನ್​ಶಿಪ್​ನಲ್ಲಿದ್ದಾರೆ ಎನ್ನುವ ರೂಮರ್​ ಹರಿದಾಡಲು ಶರುವಾಯಿತು. ಈ ವದಂತಿ ಮತ್ತಷ್ಟು ಬಲಗೊಂಡಿದ್ದು, ಈ ಜೋಡಿ ಶೇರ್​ ಷಾ ಚಿತ್ರದಲ್ಲಿ ಒಟ್ಟಿಗೆ ನಟಿಸಲು ಒಪ್ಪಿಕೊಂಡಾಗ.

ಇದುವರೆಗೆ ತಮ್ಮ ಡೇಟಿಂಗ್​ ರೂಮರ್​ ಬಗ್ಗೆ ಎಲ್ಲಿಯೂ ತುಟಿ ಬಿಚ್ಚದ ಸಿದ್ಧಾರ್ಥ್​,ಈಗ ಮಾತಾಡಿದ್ದಾರೆ. ಇತ್ತೀಚಿಗಷ್ಟೆ ತಮ್ಮ ಮುಂಬರುವ ಚಿತ್ರದ ಟ್ರೇಲರ್ ಲಾಂಚ್​​ ವೇಳೆ ಎದುರಾದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ನನ್ನ ಹಾಗೂ ಅವರ ನಡುವೆ ಅಂತಹದು ಏನೂ ಇಲ್ಲ. ನಾವಿಬ್ಬರು ಲವ್ಲಿ ಫ್ರೆಂಡ್ಸ್​ ಅಷ್ಟೇ ಎಂದು ರೂಮರ್​​ಗೆ ತೆರೆ ಎಳೆದಿದ್ದಾರೆ.

ಇನ್ನು ಕೈರಾ ಕೂಡ ಡೇಟಿಂಗ್ ಸುದ್ದಿ ನೋಡಿ ಫನ್ ಮಾಡಿದ್ದಾರಂತೆ. ಮೊನ್ನೆಯಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಿದ್ಧಾರ್ಥ್​ ಅವರನ್ನು ನಿಜವಾದ ಫ್ರೆಂಡ್​ ಎಂದು ಸಂಬೋಧಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.