ಸಿನಿಮಾಗಳಲ್ಲಿ ರೊಮಾನ್ಸ್ ಮಾಡುತ್ತಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ಇದೀಗ ರಿಯಲ್ ಲೈಫ್ ಅಲ್ಲಿ ತನ್ನ ಪತಿಗೆ ಚುಂಬಿಸಿರುವ ಫೋಟೋ ಶೇರ್ ಮಾಡಿದ್ದಾರೆ.
2007ರಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ‘ಅರಸು’ ಚಿತ್ರದಲ್ಲಿ ಶ್ರೀಯಾ ಶರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮದುವೆಗೂ ಮೊದಲು ಪ್ಯಾನ್ ಇಂಡಿಯ ಸಿನಿಮಾ ‘ಗಮನಂ’, ಸಂಡಕ್ಕರಿ ಹಾಗೂ 'ನರಗಾಸೂರ', ಹಿಂದಿಯಲ್ಲಿ ‘ತಡ್ಕ’ ಹಾಗೂ ಎಸ್.ಎಸ್.ರಾಜಮೌಳಿಯವರ 'ಆರ್ಆರ್ಆರ್' ಚಿತ್ರದಲ್ಲಿಯೂ ಒಂದು ಪಾತ್ರ ನಿರ್ವಹಿಸುತ್ತಿದ್ದಾರೆ. ಮಲಯಾಳಂನಲ್ಲಿ ‘ಸಾಲ್ಟ್ ಎನ್ ಪೆಪ್ಪರ್’ ರಿಮೇಕ್ ಸಿನಿಮಾವನ್ನು ಸಹ ಇವರು ಒಪ್ಪಿಕೊಂಡಿದ್ದಾರೆ.