ETV Bharat / sitara

ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಶೆರ್ಲಿನ್ ಛೋಪ್ರಾ - Bollywood producer Sajid khan

ಸುಮಾರು 6 ವರ್ಷಗಳ ಹಿಂದೆ ಚಿತ್ರವೊಂದರ ಬಗ್ಗೆ ಚರ್ಚಿಸಲು ಸಾಜಿದ್ ಖಾನ್ ಭೇಟಿ ಮಾಡಿದಾಗ ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಬಾಲಿವುಡ್ ನಟಿ ಶೆರ್ಲಿನ್ ಛೋಪ್ರಾ ಆರೋಪಿಸಿದ್ದು ಟ್ವಿಟ್ಟರ್​​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

Sherlyn Chopra
ಶೆರ್ಲಿನ್ ಛೋಪ್ರಾ
author img

By

Published : Jan 20, 2021, 10:41 AM IST

Updated : Jan 20, 2021, 11:03 AM IST

2013 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ ಬಾಲಿವುಡ್ ನಟಿ ಜಿಯಾಖಾನ್​ ಪ್ರಕರಣ ಮತ್ತೆ ಚರ್ಚೆಯಾಗುತ್ತಿದೆ. ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ನನ್ನ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಜಿಯಾಖಾನ್ ಸಹೋದರಿ ಆರೋಪಿಸಿದ ಬೆನ್ನಲ್ಲೇ ನಟಿ ಶೆರ್ಲಿನ್ ಛೋಪ್ರಾ ಸಾಜಿದ್ ಖಾನ್​​​ನಿಂದ ನನಗೂ ಅಂತ ಅನುಭವ ಆಗಿತ್ತು ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Sajid Khan
ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್

"ಸುಮಾರು 6 ವರ್ಷಗಳ ಹಿಂದೆ ನನ್ನ ತಂದೆ ನಿಧನರಾದ ಕೆಲವು ದಿನಗಳ ನಂತರ ನಾನು ಚಿತ್ರವೊಂದರ ಬಗ್ಗೆ ಮಾತನಾಡಲು ಸಾಜಿದ್ ಖಾನ್ ಅವರನ್ನು ಭೇಟಿಯಾಗಿದ್ದೆ. ಆಗ ಅಲ್ಲಿ ಸಾಜಿದ್ ಒಬ್ಬರೇ ಇದ್ದರು. ಇದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಸಾಜಿದ್ ಖಾನ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ನನಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದರು. ನಾನು ಅವರಿಗೆ ಬೈಯ್ದು ಅಲ್ಲಿಂದ ಹೊರಬಂದೆ" ಎಂದು ಶೆರ್ಲಿನ್ ಛೋಪ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • He had tried his best to get me to feel his penis in ways more than one!

    I had advised him to take his penis in his own hands and masturbate as self-help is the best help. https://t.co/QTnxYJKZtd

    — Sherni (@SherlynChopra) January 20, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಪ್ಯಾಂಟ್​​ ಲೆಸ್​​ ನಿಧಿ.. 'ದೊಡ್ಡ ಚಡ್ಡಿ ಹಾಕೋಕಾಗಲ್ವ' ಎಂದ ನೆಟ್ಟಿಗರು..

ಜಿಯಾ ಖಾನ್ ಸಹೋದರಿ ಕೂಡಾ ಇತ್ತೀಚೆಗೆ "ತನ್ನ ಅಕ್ಕನಿಗೆ ಸಾಜಿದ್ ಖಾನ್ ಲೈಂಗಿಕ ಕಿರುಕುಳ ನೀಡಿದ್ದರು. ಅಕ್ಕ ನನ್ನೊಂದಿಗೆ ಎಲ್ಲವನ್ನೂ ಹೇಳಿಕೊಂಡಿದ್ದಳು. ಚಿತ್ರೀಕರಣವೊಂದಕ್ಕೆ ತೆರಳಿದಾಗ ಸಾಜಿದ್ ಖಾನ್ ಅಕ್ಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣ ಅಲ್ಲಿಂದ ಹಿಂತಿರುಗಿದೊಡನೆ ನನ್ನ ಬಳಿ ಅಕ್ಕ ಅಳುತ್ತಾ ಎಲ್ಲವನ್ನೂ ಹೇಳಿಕೊಂಡಿದ್ದಳು. ನಾನು ಈ ಚಿತ್ರಕ್ಕೆ ಒಪ್ಪಂದ ಮಾಡಿಕೊಂಡಿದ್ದೇನೆ. ಆದರೆ ಚಿತ್ರದಿಂದ ಹೊರ ಬಂದರೆ ಆತ ನನ್ನ ಮೇಲೆ ದೂರು ದಾಖಲಿಸುತ್ತೇನೆ, ನಿನ್ನ ಕರಿಯರ್ ನಾಶ ಮಾಡುತ್ತೇನೆಂದು ಬ್ಲಾಕ್​ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾಗಿ ಜಿಯಾಖಾನ್ ಸಹೋದರಿ ಹೇಳಿದ್ದಾರೆ". 2 ವರ್ಷಗಳ ಹಿಂದೆ ಮಿ ಟೂ ಪ್ರಕರಣದ ವೇಳೆ ಕೂಡಾ ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿತ್ತು.

Last Updated : Jan 20, 2021, 11:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.