ETV Bharat / sitara

ರಿಯಾ ಚಕ್ರವರ್ತಿ ಟ್ವೀಟ್​​​​ಗೆ ಬೆಂಬಲ ವ್ಯಕ್ತಪಡಿಸಿದ ನಟ ಶೇಖರ್ ಸುಮನ್​ - ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮನವಿ ಮಾಡಿದ್ದಾರೆ. ರಿಯಾ ಟ್ವೀಟ್​​​​ಗೆ ನಟ ಶೇಖರ್ ಸುಮನ್ ಬೆಂಬಲ ವ್ಯಕ್ತಪಡಿಸಿದ್ಧಾರೆ.

shekhar suman lauds rhea chakraborty
ಶೇಖರ್ ಸುಮನ್​
author img

By

Published : Jul 17, 2020, 1:35 PM IST

ಜೂನ್ 14 ರಂದು ಸಾವನ್ನಪ್ಪಿದ ಬಾಲಿವುಡ್​​ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿದ ರಿಯಾ ಚಕ್ರವರ್ತಿಯನ್ನು ನಟ ಹಾಗೂ ಕಿರುತೆರೆ ನಿರೂಪಕ ಶೇಖರ್ ಸುಮನ್ ಶ್ಲಾಘಿಸಿದ್ಧಾರೆ.

ತಮ್ಮ ಟ್ವಿಟ್ಟರ್​​​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುಮನ್,​ 'ಕೊನೆಗೂ ರಿಯಾ ಕೂಡಾ ಈ ವಿಚಾರವಾಗಿ ಧ್ವನಿ ಎತ್ತಿದ್ದು ಸಂತೋಷವಾಯ್ತು. ಈ ಬಗ್ಗೆ ಜನರು ಆಸಕ್ತಿ ತೋರುತ್ತಿದ್ದು ಇದು ಒಳ್ಳೆಯ ಬೆಳವಣಿಗೆ' ಎಂದು ಹೇಳಿದ್ದಾರೆ. ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ರಿಯಾ ಚಕ್ರವರ್ತಿ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಶೇಖರ್ ಈ ಟ್ವೀಟ್ ಮಾಡಿ ರಿಯಾ ಅವರನ್ನು ಶ್ಲಾಘಿಸಿದ್ದಾರೆ.

  • It's our conviction"Homicide not Suicide".Hasten up the process for #CBIEnquiryForSushant before it's too late.The voices will not slow down till he gets justice.we shall go on fighting for what we think is right and what we know is our right.

    — Shekhar Suman (@shekharsuman7) July 16, 2020 " class="align-text-top noRightClick twitterSection" data=" ">

'ಗೌರವಾನ್ವಿತ ಅಮಿತ್​ ಷಾ ಸರ್, ನಾನು ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ. ಸುಶಾಂತ್ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಸರ್ಕಾರ ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಒದಗಿಸುತ್ತದೆ ಎಂಬ ಭರವಸೆ ಇದೆ. ಆದರೂ ಜನರ ಒತ್ತಾಯದ ಮೇರೆಗೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ನಾನು ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ಧೇನೆ. ಸುಶಾಂತ್ ಸಾವಿನ ಹಿಂದೆ ಅಡಗಿರುವ ಸತ್ಯವನ್ನು ನಾವು ತಿಳಿಯಬೇಕು. ಆದ್ದರಿಂದ ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದು ರಿಯಾ ಚಕ್ರವತಿ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಟ್ವೀಟ್ ಮಾಡಿದ್ದರು.

  • Beware,the voices are turning into a storm which will blow the lid off many ugly truths.Beware,it will engulf you and punish you if you stay silent or are guilty.Beware,this storm will not subside till the culprits are exposed and brought to books.#justice

ಈ ಬಗ್ಗೆ ಪ್ರತಿಕ್ರಿಯಿಸಿರುವ ಶೇಖರ್​, 'ಸುಶಾಂತ್ ಸಾವಿಗೆ ನ್ಯಾಯ ದೊರೆಯುವುದೆಂಬ ಭರವಸೆ ಇದೆ. ಸುಶಾಂತ್ ಸಾವಿನ ಹಿಂದಿರುವ ಅಪರಾಧಿಗಳನ್ನು ಬಯಲಿಗೆ ಎಳೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ಸುಶಾಂತ್ ಅವರನ್ನು ಕಳೆದುಕೊಂಡು ಅವರ ಕುಟುಂಬ ಇನ್ನೂ ನೋವು ಅನುಭವಿಸುತ್ತಿದೆ. ಸಿಬಿಐ ವಿಚಾರಕ್ಕೆ ಸಂಬಂಧಿಸಿದಂತೆ ಸುಶಾಂತ್ ಕುಟುಂಬ ಮೌನವಾಗಿದೆ. ಆದರೆ ಅವರ ಹಿಂದೆ ನಾವು ಇದ್ಧೇವೆ. ಸುಶಾಂತ್​​​ ಸಾವಿಗೆ ನ್ಯಾಯ ದೊರೆಯುವವರೆಗೂ ನಾವು ಬಿಡುವುದಿಲ್ಲ' ಎಂದು ಶೇಖರ್ ಟ್ವೀಟ್ ಮಾಡಿದ್ದಾರೆ.

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಶವ ಮುಂಬೈನ ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಂದಿನಿಂದ ದೇಶಾದ್ಯಂತ ಬಾಲಿವುಡ್​​​ನಲ್ಲಿ ಸ್ವಜನಪಕ್ಷಪಾತ ಹಾಗೂ ಸುಶಾಂತ್ ಸಾವಿನ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇದೀಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.