ಮುಂಬೈ (ಮಹಾರಾಷ್ಟ್ರ): ಜಾನ್ವಿ ಕಪೂರ್ ಬಳಿಕ, ಕಪೂರ್ ಕುಟುಂಬದ ಮತ್ತೊಂದು ಕುಡಿ ಈಗ ಬಾಲಿವುಡ್ ಪ್ರವೇಶಿಸಲು ಸಿದ್ಧತೆ ಮಾಡಿಕೊಂಡಿದೆ. ನಟ ಸಂಜಯ್ ಕಪೂರ್ ಅವರ ಪುತ್ರಿ ಶನಾಯ್ ಕಪೂರ್, ನಿರ್ಮಾಪಕ ಕರಣ್ ಜೋಹರ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ದೊಡ್ಡ ಪರದೆಗೆ ಪದಾರ್ಪಣೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸ್ಟಾರ್ ನಟರೊಬ್ಬರ ಮಗಳಾಗಿ ತೆರೆಯ ಮೇಲಿನ ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶನಾಯ್ ಕಪೂರ್, ನಾನು ಯಾವಾಗಲೂ ನನ್ನನ್ನು ಪ್ರೀತಿಸುವ ಜನರಲ್ಲಿ ಬೆರೆಯುವ ಪ್ರಯತ್ನ ಮಾಡುತ್ತೇನೆ.
![Shanaya Kapoor on judgements that come along with the 'star kid' tag](https://etvbharatimages.akamaized.net/etvbharat/prod-images/202485639_3000659010174543_5267808013353481636_n_2010newsroom_1634710985_919.jpg)
ಧನಾತ್ಮಕ ವಿಚಾರಗಳನ್ನು ಇಟ್ಟುಕೊಂಡಿರುವ ನಾನು ಮಾಧ್ಯಮವಾಗಲಿ ಅಥವಾ ನನ್ನ ಅನುಯಾಯಿಗಳಾಗಲಿ ಯಾವಾಗಲೂ ಅವರ ಪ್ರೀತಿ ಮತ್ತು ಬೆಂಬಲವನ್ನು ಬಯಸುತ್ತೇನೆ. ಇದು ನನ್ನ ಮೊದಲ ಆದ್ಯತೆ, ಬಳಿಕವೇ ಉಳಿದವುಗಳು ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಶನಾಯಾ ತನ್ನ ಸೋದರ ಸಂಬಂಧಿ ಜಾನ್ವಿ ಕಪೂರ್ ನಟನೆಯ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಎಂಬ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಕೆಲವು ಅನುಭವಗಳನ್ನು ಹೊಂದಿದ್ದು, ಈಗ ನಟಿಯಾಗುವ ಆಸೆ ಹೊತ್ತು ಬಂದಿದ್ದಾರೆ. ಈ ಅಗ್ನಿ ಪರೀಕ್ಷೆಗೆ ಬೇಕಾದ ಎಲ್ಲ ತಯಾರಿ ಸಹ ಮಾಡಿಕೊಂಡಿದ್ದಾರೆ.
![Shanaya Kapoor on judgements that come along with the 'star kid' tag](https://etvbharatimages.akamaized.net/etvbharat/prod-images/13404829_178_13404829_1634711116507.png)
ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ನನ್ನ ಸಿನಿಮಾ ವೃತ್ತಿ ಜೀವನದ ಮೊದಲ ಮೆಟ್ಟಿಲು. ಇದು ಉದ್ಯಮಕ್ಕೆ ಕಾಲಿಡಲು ಸಹಾಯ ಮಾಡಿತು. ನಾನು ಜನರಿಗೆ ಬೇಕಾದ ಚಲನಚಿತ್ರವನ್ನು ಹೇಗೆಲ್ಲ ನೀಡಬೇಕು ಎಂಬುವುದರಿಂದ ಹಿಡಿದು ಸೆಟ್ನಲ್ಲಿರುವ ಪ್ರತಿಬ್ಬ ಆರ್ಟಿಸ್ಟ್ ಜೊತೆಗೆ ಹೇಗೆಲ್ಲ ವರ್ತಿಸಬೇಕು ಅನ್ನೋದನ್ನು ಸಹ ಕಲಿತಿದ್ದೇನೆ. ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಲು ಇದೊಂದು ಅವಕಾಶ ನನಗೆ ಪುಷ್ಟಿ ನೀಡಿತು ಎಂದು ತಾವು ಕಲಿತ ಹಾಗೂ ಅನುಭವಿಸಿದ ಈ ಹಿಂದಿನ ದಿನಮಾನಗಳನ್ನು ಇದೇ ವೇಳೆ ಮೆಲುಕು ಹಾಕಿದ್ದಾರೆ.
- " class="align-text-top noRightClick twitterSection" data="
">