ಮುಂಬೈ: ಬಾಲಿವುಡ್ ನಟರಾದ ವಿಕ್ಕಿ ಕೌಶಲ್, ಅರ್ಜುನ್ ಕಪೂರ್ ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ ಕಪೂರ್ ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಬಾಂದ್ರಾ ಹಾಗೂ ಜುಹು ಪ್ರದೇಶಗಳಲ್ಲಿ ಹೆಚ್ಚು ನೆಲೆಸಿರುವ ಸೆಲಬ್ರಿಟಿಗಳು ಆಗ್ಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ನಾಲ್ಕು ವರ್ಷಗಳ ಬಳಿಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಸುಮಂತ್ ಶೈಲೇಂದ್ರ...!
ನಟ ವಿಕ್ಕಿ ಕೌಶಲ್ ಬಾಂದ್ರಾದ ಜಿಮ್ ಒಂದರ ಬಳಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ವಿಕ್ಕಿ ಕೌಶಲ್ ಸದ್ಯಕ್ಕೆ 'ಸರ್ದಾರ್ ಉಧಾಮ್ ಸಿಂಗ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನಟ ಅರ್ಜುನ್ ಕಪೂರ್ ಕೂಡಾ ಕ್ಯಾಮರಾ ನೋಡಿದೊಡನೆ ಒಂದು ಕ್ಷಣ ನಿಂತು ಪೋಸ್ ನೀಡಿದ್ದಾರೆ. ಅರ್ಜುನ್ ಕಪೂರ್ ಸದ್ಯಕ್ಕೆ 'ಸಂದೀಪ್ ಔರ್ ಪಿಂಕಿ ಫರಾರ್' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ತೆರೆ ಕಾಣುತ್ತಿದೆ. ಕಬೀರ್ ಸಿಂಗ್ ಖ್ಯಾತಿಯ ನಟ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಜೊತೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾಹಿದ್ ಸದ್ಯಕ್ಕೆ 'ಜೆರ್ಸಿ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.