ETV Bharat / sitara

'ಗ್ಯಾಸ್​​ಲೈಟ್​​' ಚಿತ್ರೀಕರಣಕ್ಕಾಗಿ ರಾಜ್​​ಕೋಟ್​​ಗೆ​ ತೆರಳಿದ ನಟಿ ಸಾರಾ - Director Pawan Kriplani next movie gaslight

ನಟಿ ಸಾರಾ ಅಲಿ ಖಾನ್ ಭಾನುವಾರ ಗ್ಯಾಸ್‌ಲೈಟ್ ಚಿತ್ರೀಕರಣಕ್ಕಾಗಿ ಗುಜರಾತ್‌ನ ರಾಜ್‌ಕೋಟ್‌ಗೆ ತೆರಳಿದ್ದಾರೆ. ಪವನ್ ಕೃಪಲಾನಿ ನಿರ್ದೇಶನದ ಈ ಚಿತ್ರದಲ್ಲಿ ಸಾರಾ ​ನಟ ವಿಕ್ರಾಂತ್‌ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ..

Sara Ali Khan Off To Rajkot To Shoot Gaslight
ಗ್ಯಾಸ್​​ಲೈಟ್​​ ಸಿನಿಮಾದ ಚಿತ್ರೀಕರಣಕ್ಕೆ ರಾಜ್​​ಕೋಟ್​ ತೆರಳಿದ ಸಾರಾ
author img

By

Published : Feb 28, 2022, 4:03 PM IST

ಹೈದರಾಬಾದ್: ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ತಮ್ಮ ಮುಂಬರುವ ಗ್ಯಾಸ್​ಲೈಟ್​ ಸಿನಿಮಾದ ಚಿತ್ರೀಕರಣಕ್ಕಾಗಿ ಗುಜರಾತಿನ ರಾಜ್​ಕೋಟ್​ಗೆ ತೆರಳಿದರು. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಗ್ಯಾಸ್‌ಲೈಟ್‌ ಸಿನಿಮಾಗೆ ನಿರ್ದೇಶಕ ಪವನ್ ಕೃಪಲಾನಿ ಆ್ಯಕ್ಷನ್-ಕಟ್​ ಹೇಳಿದ್ದಾರೆ. ಈ ಚಿತ್ರದ ಶೂಟಿಂಗ್‌ಗಾಗಿ ಸಾರಾ ಗುಜರಾತ್‌ಗೆ ತೆರಳಿದ್ದಾರೆ. ಸಿನಿಮಾದಲ್ಲಿ ಚಿತ್ರಾಂಗದ ಸಿಂಗ್​​ಮತ್ತು ವಿಕ್ರಾಂತ್ ಮಾಸ್ಸಿ ಅಭಿನಯಿಸುತ್ತಿದ್ದಾರೆ.

ಸದ್ಯ ಚಿತ್ರತಂಡ ರಾಜ್​ಕೋಟ್​​ನಲ್ಲಿ ಸಿನಿಮಾದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಿದೆ. ಸಾರಾ ಮೊದಲ ಬಾರಿಗೆ ಪ್ರತಿಭಾವಂತ ಬಾಲಿವುಡ್​ ನಟ ವಿಕ್ರಾಂತ್‌ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದು, ಇದಕ್ಕಾಗಿ ಅವರು ಉತ್ಸುಕರಾಗಿದ್ದಾರೆ.

ಗ್ಯಾಸ್​ಲೈಟ್​​ ಸಿನಿಮಾವನ್ನು ಹೊರತುಪಡಿಸಿ ಸಾರಾ ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಇದೊಂದು ರೊಮ್ಯಾಂಟಿಕ್ ಡ್ರಾಮಾ ಆಧಾರಿತ ಚಿತ್ರವಾಗಿದ್ದು, ಹೆಸರಿಡದ ಚಿತ್ರವು ಮಧ್ಯಪ್ರದೇಶದಲ್ಲಿ ಬಹುತೇಕ ಚಿತ್ರೀಕರಣಗೊಂಡಿದೆ. ಈ ಸಿನಿಮಾದಲ್ಲಿ ಹಿರಿಯ ನಟ ರಾಕೇಶ್ ಬೇಡಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬಿಳಿ ಲೆಹೆಂಗಾದಲ್ಲಿ ಮಿಂಚಿದ ಸುಹಾನಾ ಖಾನ್: ಮೆಚ್ಚುಗೆ ವ್ಯಕ್ತಪಡಿಸಿದ ತಾಯಿ ಗೌರಿ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.