ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ಈ ವಿಚಾರವನ್ನು ಸ್ವತ: ಸಂಜಯ್ ದತ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಇದೀಗ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
'ಸಂಜಯ್ ದತ್ ಗುಣಮುಖರಾಗಲೆಂದು ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಈ ಸಮಯದಲ್ಲಿ ನಮಗೆ ನಿಮ್ಮೆಲ್ಲರ ಬೆಂಬಲ ಹಾಗೂ ಪ್ರಾರ್ಥನೆಯ ಅಗತ್ಯವಿದೆ. ಇದಕ್ಕೂ ಮುನ್ನ ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ ಹಾಗೂ ಆ ಕಷ್ಟಗಳಿಂದ ಹೊರ ಬಂದಿದ್ದೇವೆ. ಇದೀಗ ಈ ಸಮಸ್ಯೆ ಕೂಡಾ ಆದಷ್ಟು ಬೇಗ ಪರಿಹಾರವಾಗುತ್ತದೆ ಎಂಬ ನಂಬಿಕೆ ನನಗೆ ಇದೆ. ದಯವಿಟ್ಟು ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಅದರ ಬದಲಿಗೆ ನಿಮ್ಮ ಪ್ರೀತಿ, ಬೆಂಬಲ ಹಾರೈಕೆ ಸಂಜು ಮೇಲೆ ಇರಲಿ ಎಂದಷ್ಟೇ ಅಭಿಮಾನಿಗಳ ಬಳಿ ಮನವಿ ಮಾಡುತ್ತೇನೆ'.
'ಸಂಜು ಯಾವುದೇ ಸಮಸ್ಯೆ ಆಗಲಿ ಧೈರ್ಯದಿಂದ ಹೋರಾಡುವ ವ್ಯಕ್ತಿ. ದೇವರು ನಮಗೆ ನೀಡಿರುವ ಪರೀಕ್ಷೆಯನ್ನು ಎದುರಿಸುವುದು ನಮಗೆ ಈಗ ಸವಾಲಾಗಿದೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಆಶೀರ್ವಾದವನ್ನಷ್ಟೇ ನಾನು ವಿನಂತಿಸುತ್ತಿದ್ದೇನೆ. ನಾವು ಈ ಪರೀಕ್ಷೆಯಲ್ಲಿ ಖಂಡಿತ ಗೆದ್ದು ಬರುತ್ತೇವೆ ಎಂಬ ನಂಬಿಕೆ ಇದೆ' ಎಂದು ಮಾನ್ಯತಾ ದತ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.