ETV Bharat / sitara

ಬಾಲಿವುಡ್​ ನಟ ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್​!

ಬಾಲಿವುಡ್​ನ ಹಿರಿಯ ನಟ ಸಂಜಯ್​ ದತ್​ ಇದೀಗ ಹೆಚ್ಚಿನ ಚಿಕಿತ್ಸೆಗೋಸ್ಕರ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದು, ಇದೇ ವಿಷಯವಾಗಿ ಅವರು ಟ್ವೀಟ್​​ ಮಾಡಿದ್ದಾರೆ.

Sanjay Dutt
Sanjay Dutt
author img

By

Published : Aug 12, 2020, 4:50 AM IST

Updated : Aug 12, 2020, 6:32 AM IST

ಮುಂಬೈ: ಉಸಿರಾಟದ ತೊಂದರೆ ಹಾಗೂ ಅನಾರೋಗ್ಯದ ಕಾರಣ ಕಳೆದ ಕೆಲ ದಿನಗಳ ಹಿಂದೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​ ನಟ ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್​ ಇರುವುದು ಕನ್ಫರ್ಮ್​ ಆಗಿದ್ದು, ಹೆಚ್ಚಿನ ಚಿಕಿತ್ಸೆಗೋಸ್ಕರ ಅವರು ಯುಎಸ್​ಗೆ ಪ್ರಯಾಣ ಬೆಳೆಸಲಿದ್ದಾರೆ.

61 ವರ್ಷದ ನಟ ಕಳೆದ ಶನಿವಾರದಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಅವರಿಗೆ 4ನೇ ಹಂತದ ಲಂಗ್​​​ ಕ್ಯಾನ್ಸರ್​ ಇರುವುದು ಖಚಿತಗೊಂಡಿದೆ. ಇನ್ನು ತಾವು ಸಿನಿಮಾದಿಂದ ಸಣ್ಣ ಬ್ರೇಕ್​ ಪಡೆದುಕೊಳ್ಳುತ್ತಿರುವುದಾಗಿ ಟ್ವೀಟ್​ ಮಾಡಿರುವ ಅವರು, ನನಗೆ ಚಿಕಿತ್ಸೆಯ ಅವಶ್ಯಕತೆ ಇದೆ. ನನ್ನ ಸ್ನೇಹಿತರು, ಕುಟುಂಬಸ್ಥರು ನನ್ನೊಂದಿಗಿದ್ದಾರೆ. ವದಂತಿ ನಂಬಬೇಡಿ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಸದ್ಯ ಅವರು ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​​​-2ರಲ್ಲಿ ನಟನೆ ಮಾಡಿದ್ದು, ಅಧೀರ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Last Updated : Aug 12, 2020, 6:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.