ಲಾಸ್ ಏಂಜಲೀಸ್ (ಅಮೆರಿಕ): ಆಸ್ಕರ್ ವಿಜೇತ ಬ್ರಾಡ್ ಪಿಟ್ ಅಭಿನಯದ ಆ್ಯಕ್ಷನ್-ಥ್ರಿಲ್ಲರ್ ‘ಬುಲೆಟ್ ಟ್ರೈನ್’ ಚಿತ್ರಕ್ಕೆ ಹಾಲಿವುಡ್ ತಾರೆ ಸಾಂಡ್ರಾ ಬುಲಕ್ ಸೇರ್ಪಡೆಯಾಗಿದ್ದಾರೆ.
ಇಸಾಕಾ ಕೊಟಾರ್ ಅವರ ಜಪಾನೀಸ್ ಕಾದಂಬರಿ ‘ಮಾರಿಯಾ ಬೀಟಲ್’ ಅನ್ನು ಆಧರಿಸಿದ ಸೋನಿ ಪಿಕ್ಚರ್ಸ್ ಚಿತ್ರವನ್ನು ಡೇವಿಡ್ ಲೀಚ್ ನಿರ್ದೇಶಿಸಲಿದ್ದಾರೆ.
ಸ್ಪೀಡ್, ದಿ ಬ್ಲೈಂಡ್ ಸೈಡ್ ಮತ್ತು ಗ್ರಾವಿಟಿ ನಂತಹ ಚಲನಚಿತ್ರಗಳಲ್ಲಿ ನಟಿಯಾಗಿ ಸಾಂಡ್ರಾ ಅಭಿನಯಿಸಿದ್ದಾರೆ. ಬುಲೆಟ್ ಟ್ರೈನ್ ಚಿತ್ರದಲ್ಲಿ ಜೋಯಿ ಕಿಂಗ್, ಆರನ್ ಟೇಲರ್ ಜಾನ್ಸನ್, ಬ್ರಿಯಾನ್ ಟೈರಿ ಹೆನ್ರಿ, ಝಾಝೈ ಬೀಟ್ಜ್, ಮೈಕೆಲ್ ಶಾನನ್, ಲೋಗನ್ ಲರ್ಮನ್, ಮಾಸಿ ಓಕಾ ಮತ್ತು ಆಂಡ್ರ್ಯೂ ಕೊಜಿ ಅಭಿನಯಿಸುತ್ತಿದ್ದಾರೆ.
ಕಥಾವಸ್ತುವಿನ ವಿವರಗಳು ಅಸ್ಪಷ್ಟವಾಗಿದ್ದು, ಬುಲಕ್ ಯಾವ ಪಾತ್ರ ಅಭಿನಯಿಸಲಿದ್ದಾರೆ ಎಂಬುದು ಗೌಪ್ಯವಾಗಿಡಲಾಗಿದೆ. ಝಾಕ್ ಓಲ್ಕೆವಿಚ್ ಈ ಚಿತ್ರದ ಸ್ಕ್ರಿಪ್ಟ್ ಬರೆದಿದ್ದಾರೆ.
ನೆಟ್‌ಫ್ಲಿಕ್ಸ್ ಹಿಟ್ ‘ಬರ್ಡ್ ಬಾಕ್ಸ್’ ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬುಲಕ್ ಈಗ ಬುಲೆಟ್ ಟ್ರೈನ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಸಾಂಡ್ರಾ ಬುಲಕ್ ಅಮೆರಿಕಾದ ಹೆಸರಾಂತ ಅಭಿನೇತ್ರಿ. ಯಶಸ್ವಿ ಚಿತ್ರಗಳಾದ ವೈಲ್ ಯು ವರ್ ಸ್ಲೀಪಿಂಗ್ (1990) ಮುಂತಾದ ಚಿತ್ರಗಳಲ್ಲಿ ನೀಡಿದ ಮನೋಜ್ಞ ಅಭಿನಯದಿಂದ ಅವರು ಪ್ರಸಿದ್ಧಿಗೆ ಬಂದದ್ದು. ಆನಂತರ ಹಾಲಿವುಡ್ನ ಪ್ರಮುಖ ಸಾಲಿನ ಅಭಿನೇತ್ರಿಯರ ಸಾಲಿಗೆ ಸೇರ್ಪಡೆಯಾಗಿ ಮಿನುಗು ತಾರೆಯಾದರು. ಮಿಸ್ ಕೊಜಿನಿಯಾಲಿಟಿ ಮತ್ತು 2005 ಕ್ರಾಶ್ ಆಕೆಗೆ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟಿತು. ಅಷ್ಟೇ ಅಲ್ಲ, 2007ರಲ್ಲಿ ಚಿತ್ರ ಜಗತ್ತಿನ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ 14ನೇ ಸ್ಥಾನಕ್ಕೇರಿದರು. ಒಟ್ಟು ಆಸ್ತಿ 85 ಮಿಲಿಯನ್ ಡಾಲರ್!