ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಸಲ್ಲು ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
-
#RadheTrailerhttps://t.co/tRc146aR8R@bindasbhidu @DishPatani @RandeepHooda @PDdancing @SKFilmsOfficial @ZeeStudios_ @SohailKhan @atulreellife @ReelLifeProdn @ZeeMusicCompany @ZeeplexOfficial @ZEE5India
— Salman Khan (@BeingSalmanKhan) April 22, 2021 " class="align-text-top noRightClick twitterSection" data="
">#RadheTrailerhttps://t.co/tRc146aR8R@bindasbhidu @DishPatani @RandeepHooda @PDdancing @SKFilmsOfficial @ZeeStudios_ @SohailKhan @atulreellife @ReelLifeProdn @ZeeMusicCompany @ZeeplexOfficial @ZEE5India
— Salman Khan (@BeingSalmanKhan) April 22, 2021#RadheTrailerhttps://t.co/tRc146aR8R@bindasbhidu @DishPatani @RandeepHooda @PDdancing @SKFilmsOfficial @ZeeStudios_ @SohailKhan @atulreellife @ReelLifeProdn @ZeeMusicCompany @ZeeplexOfficial @ZEE5India
— Salman Khan (@BeingSalmanKhan) April 22, 2021
ಪ್ರಭುದೇವ್ ನಿರ್ದೇಶನದ ಈ ಚಿತ್ರ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ತಡವಾಗಿದೆ. ಚಿತ್ರವನ್ನು ಓಟಿಟಿ ಪ್ಲಾಟ್‌ಫಾರಂನಲ್ಲಿ ರಿಲೀಸ್ ಮಾಡುವ ಸುದ್ದಿ ಹರಡಿದಾಗ ಸಿನಿಮಾ ಹಾಲ್ ಮಾಲೀಕರ ಸಂಘಗಳು ಸಲ್ಲುಗೆ ಪತ್ರ ಬರೆದು 2021ರ ಈದ್ ಹಬ್ಬದಂದು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವಂತೆ ಕೋರಿದ್ದರು. ಅವರ ವಿನಂತಿಯ ಮೇರೆಗೆ ಸಲ್ಮಾನ್ ಖಾನ್ ಈದ್ ಹಬ್ಬದಂದೇ ರಾಧೆ ಚಿತ್ರ ಮಂದಿಕ್ಕೆ ಬರುವುದಾಗಿ ಘೋಷಿಸಿದ್ದರು. ಈಗ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಓಟಿಟಿ ಪ್ಲಾಟ್ ಫಾರಂನಲ್ಲಿ ಚಿತ್ರ ಬಿಡುಗಡೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಚಿತ್ರದ ಆ್ಯಕ್ಷನ್ ಫೊಟೋ ಹಾಕಿ ಮೇ 13 ರಂದು ಈದ್ ಹಬ್ಬಕ್ಕೆ ಚಿತ್ರ ಮಂದಿರಕ್ಕೆ ಬರುವುದಾಗಿ ಪೋಸ್ಟ್ ಮಾಡಿದ್ದರು. ಪ್ರತಿ ವರ್ಷ ಇದೇ ಹಬ್ಬದಂದು ಸಲ್ಲು ಚಿತ್ರ ಬಿಡುಗಡೆಯಾಗುವುದು ಪಕ್ಕಾ ಆಗುತ್ತಿದೆ. ಅದೇ ಸಂಪ್ರದಾಯ ಇದೀಗ ಮತ್ತೆ ಮುಂದುವರೆದಿದೆ. ಈ ಹಿಂದೆ ಅವರ ಚಿತ್ರಗಳಾದ 'ಭಜರಂಗಿ ಭಾಯಿಜಾನ್', 'ದಬಾಂಗ್', 'ಕಿಕ್' ಮತ್ತು 'ಬಾಡಿಗಾರ್ಡ್' ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದವು.
ರಾಧೆ ಚಿತ್ರದಲ್ಲಿ ದಿಶಾ ಪಟಾನಿ, ಜಾಕಿ ಶ್ರಾಪ್, ಝರಿನಾ ವಹಾಬ್ ಹಾಗೂ ರಣ್ದೀಪ್ ಹೂಡಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ , ಸೋಹೆಲ್ ಖಾನ್ ಪ್ರೊಡಕ್ಷನ್ ಹಾಗೂ ರೀಲ್ ಲೈಫ್ ಪ್ರೊಡಕ್ಷನ್ ಹಣ ಹೂಡಿಕೆ ಮಾಡಿದೆ.