ಮುಂಬೈ: ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಬಿಡುಗಡೆಯಾಗಿದೆ. ಈದ್ ಹಬ್ಬದ ವೇಳೆ ತಮ್ಮ ಅಭಿಮಾನಿಗಳಿಗೆಂದು 'ರಾಧೆ' ಚಿತ್ರವನ್ನು ಕೊಟ್ಟಿದ್ದಾರೆ ಸಲ್ಮಾನ್ ಖಾನ್.
ಕೋವಿಡ್‌ನಿಂದಾಗಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 'ರಾಧೆ' ರಿಲೀಸ್ ಆಗಿದ್ದರೆ, ವಿದೇಶಗಳಲ್ಲಿ ಚಿತ್ರಮಂದಿರಗಳಲ್ಲೇ ತೆರೆಗೆ ಬಂದಿದೆ. ಐಎಂಡಿಬಿ ರೇಟಿಂಗ್‌ನಲ್ಲಿ 'ರಾಧೆ' ಚಿತ್ರಕ್ಕೆ ಅತೀ ಕಡಿಮೆ ರೇಟಿಂಗ್ ಲಭ್ಯವಾಗಿದೆ.. ಆದರೆ, ಸಿನಿಮಾ ತಯಾರಕರ ಪ್ರಕಾರ, ಈ ಚಿತ್ರವು ಪ್ಲ್ಯಾಟ್‌ಫಾರ್ಮ್‌ಗಳಾದ್ಯಂತ 4.2 ಮಿಲಿಯನ್ ವೀಕ್ಷಣೆಗಳನ್ನು ದಾಟಿ ಇತಿಹಾಸವನ್ನು ಸೃಷ್ಟಿಸಿದೆ.
ಆದರೆ, ಐಎಂಡಿಬಿ ರೇಟಿಂಗ್‌ನಲ್ಲಿ 'ರಾಧೆ' ಚಿತ್ರಕ್ಕೆ ಅತೀ ಕಡಿಮೆ ರೇಟಿಂಗ್ ಲಭ್ಯವಾಗಿದೆ. 41 ಸಾವಿರಕ್ಕೂ ಅಧಿಕ ಪ್ರೇಕ್ಷಕರ ವಿಮರ್ಶೆಗಳ ಆಧಾರದ ಮೇಲೆ ಐಎಂಡಿಬಿಯಲ್ಲಿ 'ರಾಧೆ' ಚಿತ್ರಕ್ಕೆ ಕೇವಲ '2' ರೇಟಿಂಗ್ ನೀಡಲಾಗಿದೆ.ಆ ಮೂಲಕ ಸಲ್ಮಾನ್ ಖಾನ್ ವೃತ್ತಿ ಜೀವನದಲ್ಲಿ ಅತೀ ಕಡಿಮೆ ರೇಟಿಂಗ್ ಪಡೆದ ಎರಡನೇ ಚಿತ್ರ 'ರಾಧೆ' ಎನಿಸಿಕೊಂಡಿದೆ. 1.9 ರೇಟಿಂಗ್ ಮೂಲಕ ಸಲ್ಮಾನ್ ಖಾನ್ ವೃತ್ತಿ ಜೀವನದಲ್ಲೇ ಅತಿ ಕಡಿಮೆ ರೇಟಿಂಗ್ ಪಡೆದಿರುವ ಚಿತ್ರ ಎಂಬ ಕುಖ್ಯಾತಿ ಪಡೆದಿರುವುದು 'ರೇಸ್ 3'. 2018ರಲ್ಲಿ 'ರೇಸ್ 3' ಬಿಡುಗಡೆಯಾಗಿತ್ತು.
ಪ್ರಭುದೇವ ನಿರ್ದೇಶನದಲ್ಲಿ, ಸಲ್ಮಾನ್ ಒಬ್ಬ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ದಿಶಾ ಪಟಾನಿ ಸಲ್ಮಾನ್ಗೆ ನಾಯಕಿ. ಸಲ್ಮಾನ್ ಮತ್ತು ದಿಶಾ ಜೊತೆಗೆ, ರಾಧೆ ಸಿನಿಮಾದಲ್ಲಿ ಜಾಕಿ ಶ್ರಾಫ್ ಮತ್ತು ರಂದೀಪ್ ಹೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.