ETV Bharat / sitara

ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಬೇಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ - ಅಂತಿಮ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನಿರ್ದೇಶನ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದಾಡಿದ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದು, ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Salman Khan urges fans to not burst firecrackers in theatre, warns of 'huge fire hazard'
ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸದಂತೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮನವಿ
author img

By

Published : Nov 28, 2021, 11:58 AM IST

ಮುಂಬೈ(ಮಹಾರಾಷ್ಟ್ರ): ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಬೇಡಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ 'ಅಂತಿಮ್- ದಿ ಫೈನಲ್ ಟ್ರೂಥ್' ಚಿತ್ರದ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಇನ್ಸ್​​ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಲ್ಮಾನ್ ಖಾನ್, ಚಿತ್ರಮಂದಿರದೊಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡದಂತೆ ಥಿಯೇಟರ್ ಮಾಲೀಕರಿಗೆ ಒತ್ತಾಯಿಸಿದರು. ಇದರ ಜೊತೆಗೆ, ಪಟಾಕಿ ಹಚ್ಚುವುದರಿಂದ ಅಗ್ನಿ ಅನಾಹುತಗಳು ಸಂಭವಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಚಿತ್ರಮಂದಿರದಲ್ಲಿ ಪಟಾಕಿ ಹಚ್ಚುವುದರಿಂದ ಪ್ರಾಣಾಪಾಯವೂ ಸಂಭವಿಸಬಹುದು. ಥಿಯೇಟರ್ ಮಾಲೀಕರು ಪ್ರವೇಶದ್ವಾರದಲ್ಲೇ ಪಟಾಕಿ ತರುವ ವ್ಯಕ್ತಿಗಳನ್ನು ತಡೆಯಬೇಕು ಎಂದು ಸಲ್ಮಾನ್ ಬರೆದುಕೊಂಡಿದ್ದಾರೆ.

'ಅಂತಿಮ್- ದಿ ಫೈನಲ್ ಟ್ರೂಥ್' ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್​ ನಿರ್ಮಿಸಿದೆ. ಕನ್ನಡಿಗ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷ.

ಇದನ್ನೂ ಓದಿ: ಈ ಸಿನಿಮಾವನ್ನು ನಾನೇ ಕನ್ನಡದಲ್ಲಿ ನಿರ್ದೇಶನ ಮಾಡಲು ತೀರ್ಮಾನಿಸಿದ್ದೆ ; ನಟ ಸುದೀಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.