ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಾಯಕ ಗುರು ರಾಂಧವ ಮತ್ತು ಲುಲಿಯಾ ವಂತೂರ್ ಹಾಡಿರುವ 'ಮೇನ್ ಚಲಾ' ಹಾಡಿನಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ.
ಸಲ್ಮಾನ್ ಖಾನ್ ಜೊತೆಯಲ್ಲಿ ಪ್ರಗ್ಯಾ ಜೈಸ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡನ್ನು ಸಲ್ಮಾನ್ ಖಾನ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದರೆ, ಶಬೀನಾ ಖಾನ್ ನಿರ್ದೇಶಿಸುತ್ತಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಗಾಯಕ ಗುರು ರಾಂಧವ ಜನವರಿ 22ಕ್ಕೆ ಮೇನ್ ಚಲಾ ಹಾಡು ಯೂಟ್ಯೂಬ್ನ ಟಿ-ಸಿರೀಸ್ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಸಾರಾ ಅಲಿ ಖಾನ್