ETV Bharat / sitara

ಕೊರೊನಾ ವ್ಯಾಕ್ಸಿನ್​​ ಮೊದಲ ಡೋಸ್​ ಪಡೆದ ಸಲ್ಮಾನ್​ ಖಾನ್​​

ಸಿನಿ ನಟರಾದ ಸಂಜಯ್ ದತ್, ಶರ್ಮಿಳಾ ಟ್ಯಾಗೋರ್, ಧರ್ಮೇಂದ್ರ, ಹೇಮಾಮಾಲಿನಿ, ಮೋಹನ್ ಲಾಲ್, ಜೀತೇಂದ್ರ, ಕಮಲ್ ಹಾಸನ್, ನಾಗಾರ್ಜುನ ಮುಂತಾದವರು ಈಗಾಗಲೇ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

Salman Khan receives first dose of COVID-19 vaccine
ಕೊರೊನಾ ವ್ಯಾಕ್ಸಿನೇಷನ್​ನ ಮೊದಲ ಡೋಸ್​ ಪಡೆದ ಸಲ್ಮಾನ್​ ಖಾನ್​​
author img

By

Published : Mar 24, 2021, 10:44 PM IST

ಮುಂಬೈ: ಬಾಲಿವುಡ್ ದಬಂಗ್​ ಸಲ್ಮಾನ್​ ಖಾನ್ ಕೊರೊನಾ ವೈರಸ್​ ವ್ಯಾಕ್ಸಿನ್​ನ ಮೊದಲ ಡೋಸ್​ ಪಡೆದುಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಲ್ಮಾನ್ ಖಾನ್, ಇಂದು ಕೊರೊನಾ ವ್ಯಾಕ್ಸಿನ್​ನ ಮೊದಲ ಡೋಸ್ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

  • Took my first dose of vaccine today....

    — Salman Khan (@BeingSalmanKhan) March 24, 2021 " class="align-text-top noRightClick twitterSection" data=" ">

ಇವರ ಜೊತೆಗೆ ಹಿರಿಯ ಚಿತ್ರಕಥೆಗಾರ ಸಲೀಮ್ ಖಾನ್ ಹಾಗೂ ನಿರ್ಮಾಪಕರಾದ ಸಲ್ಮಾ ಖಾನ್ ಕೆಲವು ದಿನಗಳ ಹಿಂದೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು ಎಂದು ಸಲ್ಮಾನ್ ಖಾನ್ ಆಪ್ತ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿತ್ತು.

ಇದನ್ನೂ ಓದಿ: ತೆಲಂಗಾಣದಲ್ಲಿ ಶಾಲೆಗಳಿಗೆ ಮಾತ್ರ ರಜೆ, ಚಿತ್ರಮಂದಿರಗಳನ್ನ ಮುಚ್ಚಲ್ಲ..

ಇದಕ್ಕೂ ಮೊದಲು ಸಂಜಯ್ ದತ್, ಶರ್ಮಿಳಾ ಟ್ಯಾಗೋರ್, ಧರ್ಮೇಂದ್ರ, ಹೇಮಾಮಾಲಿನಿ, ಮೋಹನ್ ಲಾಲ್, ಜೀತೇಂದ್ರ, ಕಮಲ್ ಹಾಸನ್, ನಾಗಾರ್ಜುನ, ನೀನಾ ಗುಪ್ತ, ರಾಕೇಶ್ ರೋಹನ್, ಜಾನಿ ಲಿವರ್ ಸೇರಿದಂತೆ ಚಿತ್ರರಂಗ ಹಲವು ಪ್ರಮುಖರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು.

ಮಂಗಳವಾರವಷ್ಟೇ ಕೇಂದ್ರ ಸರ್ಕಾರ ಹೊಸ ಘೋಷಣೆ ಮಾಡಿದ್ದು, 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಕೊರೊನಾ ಲಸಿಕೆಯನ್ನು ಏಪ್ರಿಲ್ 1ರಿಂದ ಹಾಕಲಾಗುವುದು ಎಂದು ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.