ಬಾಲಿವುಡ್ ತಾರೆಯರಾದ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ನಲ್ಲಿ ಇದ್ದು, ಇದೀಗ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಸುಶ್ಮಿತಾ ಸೇನ್ 1994ರಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿಗೂ ಭಾಜನರಾಗಿದ್ದರು.
ಈ ಇಬ್ಬರೂ ತಮ್ಮ ಮದುವೆ ಬಗ್ಗೆ ಇಷ್ಟು ದಿನ ಎಲ್ಲಿಯೂ ಪ್ರಸ್ತಾಪ ಮಾಡಿರಲಿಲ್ಲ. ಆದ್ರೆ, ಇವರು ಡೇಟಿಂಗ್ ಮಾಡುವ ಫೋಟೋ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಇವರು ಸಂಬಂಧದ ಬಗ್ಗೆ ಹೇಳುತ್ತಿದ್ದವು.
- " class="align-text-top noRightClick twitterSection" data="
">
ತಮ್ಮ ಮದುವೆ ಬಗ್ಗೆ ಮಾತನಾಡಿರುವ ನಟ ರೋಹ್ಮನ್, ನಮ್ಮ ಮದುವೆ ಬಗ್ಗೆ ನಮ್ಮಿಬ್ಬರ ಮನೆಯಲ್ಲಿ ಯಾವುದೇ ತಕರಾರಿಲ್ಲ. ಅಪ್ಪ, ಅಮ್ಮ ಮತ್ತು ನನ್ನ ಸಹೋದರಿ ಎಲ್ಲರೂ ಒಪ್ಪಿದ್ದಾರೆ. ನಾವು ಡೇಟಿಂಗ್ನಲ್ಲಿ ಇದ್ದದ್ದೂ ಕೂಡ ನಮ್ಮ ಫ್ಯಾಮಿಲಿಗೆ ಗೊತ್ತು. ನಾನು ಮತ್ತು ಸುಶ್ಮಿತಾ ಒಂದೇ ಕುಟುಂಬದವರಂತೆ ಇದ್ದೇವೆ ಎಂದಿದ್ದಾರೆ.
- " class="align-text-top noRightClick twitterSection" data="
">
ಆದ್ರೆ, ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಸುಶ್ಮಿತಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಿಕ್ರಮ್ ಭಟ್ ಜೊತೆ ಈಗಾಗಲೇ ಮದುವೆಯಾಗಿದ್ದ ಸುಶ್ಮಿತಾ ಸೇನ್ ಅವರಿಂದ ದೂರ ಇದ್ದಾರೆ. ಅಲ್ಲದೆ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡುತ್ತ ಮದುವೆಗೂ ಸಿದ್ದರಿದ್ದಾರೆ.
- " class="align-text-top noRightClick twitterSection" data="
">