ETV Bharat / sitara

ಇತ್ತೀಚಿಗಿನ ಮನರಂಜನಾ ಕ್ಷೇತ್ರದಲ್ಲಿ ಸ್ವಜನ ಪಕ್ಷಪಾತ ಸಾಮಾನ್ಯ...ರಿಶಿನಾ ಕಂಧಾರಿ - ಮನರಂಜನಾ ಕ್ಷೇತ್ರದಲ್ಲಿ ಸ್ವಜನ ಪಕ್ಷಪಾತ ಸಾಮಾನ್ಯ ಎಂದ ರಿಶಿನಾ

ಕಿರುತೆರೆ ಹಾಗೂ ಬೆಳ್ಳಿತೆರೆ ನಡುವಿನ ವ್ಯತ್ಯಾಸದ ಬಗ್ಗೆ ಕೂಡಾ ಮಾತನಾಡಿರುವ ರಿಶಿನಾ ಕಂಧಾರಿ 'ಸಿನಿಮಾದಲ್ಲಿ ನಟಿಸಲು ನಾವು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು, ನಿರ್ದಿಷ್ಟ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕು. ಆದರೆ ಕಿರುತೆರೆಯಲ್ಲಿ ಆ ರೀತಿ ಇಲ್ಲ, ದಿನಕ್ಕೆ 7-8 ದೃಶ್ಯಗಳನ್ನು ಚಿತ್ರೀಕರಿಸಬಹುದು, ಅದರೊಂದಿಗೆ ಬೇರೆ ದೃಶ್ಯಗಳಿಗೆ ಕೂಡಾ ತಯಾರಾಗಬಹುದು ಎಂದಿದ್ದಾರೆ.

Rishina
ರಿಶಿನಾ ಕಂಧಾರಿ
author img

By

Published : Apr 3, 2020, 11:21 PM IST

2 ವರ್ಷಗಳ ಹಿಂದೆ ತಮ್ಮ ಬಿಕಿನಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದ ನಟಿ ರಿಶಿನಾ ಕಂಧಾರಿ ಹಿಂದಿ ಕಿರುತೆರೆಪ್ರಿಯರಿಗೆ ಪರಿಚಿತ ಹೆಸರು. 'ದಿಯಾ ಔರ್ ಬಾತಿ ಹಮ್​​ ಹಾಗೂ ಯೇ ಉನ್ ದಿನೋ ಕಿ ಬಾತ್ ಹೈ ಕಾರ್ಯಕ್ರಮಗಳ ಮೂಲಕ ರಿಶಿನಾ ಹೆಸರಾಗಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮನರಂಜನಾ ಲೋಕದಲ್ಲಿ ಪ್ರಸ್ತುತ ಬೆಳವಣಿಗೆ ಬಗ್ಗೆ ರಿಶಿನಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ನಾನು ಒಬ್ಬ ಉತ್ತಮ ನಟಿ ಎಂದು ನನಗೆ ಗೊತ್ತು, ನನ್ನ ಮಾದಕತೆ ನನಗೆ ಪ್ಲಸ್ ಪಾಯಿಂಟ್​. ನಾನು ಯಾವ ಪಾತ್ರವನ್ನಾದರೂ ಮಾಡಬಲ್ಲೆ. ಈಗಾಗಲೇ ಕೆಲವೊಂದು ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಆದರೆ ನನಗೆ ಹೆಸರು ತಂದುಕೊಟ್ಟಿರುವುದು ಕಿರುತೆರೆ. ನಾನು ಬದ್ಧತೆಯುಳ್ಳ ಯುವತಿಯಾಗಿದ್ದು ಇದಕ್ಕೂ ಮುನ್ನ ನನ್ನ ಟಿವಿ ಶೋಗಳ ಕಾರಣ ಸಿನಿಮಾಗಳಿಂದ ಬಂದ ಎಷ್ಟೋ ಆಫರ್​​​​​​ಗಳನ್ನು ತಿರಸ್ಕರಿಸಿದ್ದೇನೆ. ಆದರೆ ನನಗೆ ಹೆಸರು ತಂದುಕೊಡುವ ಹಾಗೂ ನನಗೆ ತೃಪಿ ಆಗುವ ಪಾತ್ರಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ' ಎಂದು ರಿಶಿನಾ ಹೇಳಿಕೊಂಡಿದ್ದಾರೆ.

ಅಲ್ಲದೆ ಕಿರುತೆರೆ ಹಾಗೂ ಬೆಳ್ಳಿತೆರೆ ನಡುವಿನ ವ್ಯತ್ಯಾಸದ ಬಗ್ಗೆ ಕೂಡಾ ಮಾತನಾಡಿರುವ ರಿಶಿನಾ ಕಂಧಾರಿ 'ಸಿನಿಮಾದಲ್ಲಿ ನಟಿಸಲು ನಾವು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು, ನಿರ್ದಿಷ್ಟ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕು. ಆದರೆ ಕಿರುತೆರೆಯಲ್ಲಿ ಆ ರೀತಿ ಇಲ್ಲ, ದಿನಕ್ಕೆ 7-8 ದೃಶ್ಯಗಳನ್ನು ಚಿತ್ರೀಕರಿಸಬಹುದು, ಅದರೊಂದಿಗೆ ಬೇರೆ ದೃಶ್ಯಗಳಿಗೆ ಕೂಡಾ ತಯಾರಾಗಬಹುದು ಎಂದಿದ್ದಾರೆ. ಇನ್ನು ಈ ಮನರಂಜನಾ ಉದ್ಯಮದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಪರ್ಧೆ ಹೆಚ್ಚಿದ್ದು ಆ ಕಾರಣಕ್ಕೆ ಸ್ವಜನ ಪಕ್ಷಪಾತ ಕೂಡಾ ಹೆಚ್ಚುತ್ತಿದೆ. ಆದರೆ ಇದು ತಪ್ಪಲ್ಲ. ನಾನು ಸಿನಿಮಾ ಕುಟುಂಬದಿಂದ ಬಂದವಳಾಗಿದ್ದು ಇದರ ಬಗ್ಗೆ ನನಗೆ ತಿಳಿದಿದೆ' ಎಂದು ರಿಶಿನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ದೇಶದಿಂದ, ನಗರಗಳಿಂದ ಭಾರತಕ್ಕೆ ಬಂದಿರುವ ನಟ-ನಟಿಯರು ಇಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಇಲ್ಲಿ ಯಶಸ್ಸು ಕಂಡರೆ, ಉಳಿದವರು ವಿಫಲರಾಗುತ್ತಾರೆ. ಆದರೆ ಆ ಕಾರಣಕ್ಕೆ ಸೆಲಬ್ರಿಟಿಗಳ ಮಕ್ಕಳನ್ನು ದೂರುವುದು ಸರಿಯಲ್ಲ ಎಂದು ರಿಶಿನಾ ಕಂಧಾರಿ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.