ಸಮಂತಾ ಅಕ್ಕಿನೇನಿ, ಮನೋಜ್ ಬಾಜಪಾಯಿ, ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಬಿಡುಗಡೆ ಆಗಿದೆ. ಇದೇ ಮೊದಲ ಬಾರಿಗೆ ‘ದಿ ಫ್ಯಾಮಿಲಿ ಮ್ಯಾನ್ 2’ ಮೂಲಕ ಸಮಂತಾ ಅವರು ವೆಬ್ ಸಿರೀಸ್ ಲೋಕಕ್ಕೆ ಕಾಲಿಟ್ಟಿದ್ದು, ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಂಡ ಎರಡನೇ ಸರಣಿಯಲ್ಲಿ ರಾಜಿ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ಹಾಗೆಯೇ ನಟ ಮನೋಜ್ ಬಾಜಪೇಯಿ ಅವರ ಶ್ರೀಕಾಂತ್ ತಿವಾರಿ ಶ್ರೀಲಂಕಾದ ತಮಿಳು ವಿಮೋಚನಾ ಹೋರಾಟಗಾರಿ ರಾಜಿ ವಿರುದ್ಧ ಎದುರಾಳಿಗಳಾಗಿ ಅಭಿನಯಿಸಿದ್ದಾರೆ.
- " class="align-text-top noRightClick twitterSection" data="
">
ರಾಜಿ ಪಾತ್ರ "ದ್ವೇಷ, ದಬ್ಬಾಳಿಕೆ ಮತ್ತು ದುರಾಸೆಯನ್ನು" ನಿರ್ಮೂಲನೆ ಮಾಡಲು ಸಮಾಜವಾಗಿ ಒಗ್ಗೂಡಿಸಲು ಹೆಚ್ಚು ಅಗತ್ಯವಿರುವ ಪಾತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಮಂತಾ ಇನ್ಸ್ಟಾದಲ್ಲಿ ಹೇಳಿಕೊಂಡಿದ್ದಾರೆ.
34 ವರ್ಷದ ಸಮಂತಾ ಅಕ್ಕಿನೇನಿ, ರಾಜಿ ಪಾತ್ರಕ್ಕೆ ತಯಾರಾಗಲು ತಮಿಳು ಹೋರಾಟದ ಕುರಿತಾದ ಸಾಕ್ಷ್ಯಚಿತ್ರಗಳನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಈಲಂನ ತಮಿಳರ, ವಿಶೇಷವಾಗಿ ಮಹಿಳೆಯರ ನೋವನ್ನು ನೋಡಲು ಈಲಂ ಯುದ್ಧದಲ್ಲಿ ಮಹಿಳೆಯರ ಕಥೆಗಳನ್ನು ಆ ಸಾಕ್ಷ್ಯಚಿತ್ರಗಳಲ್ಲಿ ನೋಡಿದಾಗ, ಈಲಂನ ತಮಿಳರು ದೀರ್ಘಕಾಲದವರೆಗೆ ಅನುಭವಿಸಿದ ತೊಂದರೆಗಳನ್ನು ಕಂಡು ನನಗೆ ಶಾಕ್ ಆಯಿತು ಎಂದು ಬರೆದುಕೊಂಡಿದ್ದಾರೆ.
ರಾಜಿಯ ಪಾತ್ರ ನನಗೆ ಬಹಳ ವಿಶೇಷವಾಗಿದೆ. ಈ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತಮ್ಮ ಅಭಿಮಾನಿಗಳಿಗೆ ಸಮಂತಾ ಕೃತಜ್ಞತೆಯನ್ನು ತಿಳಿಸಿದ್ದಾರೆ. ಇದು ಅವರ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.
ಫ್ಯಾಮಿಲಿ ಮ್ಯಾನ್ 2 ನಲ್ಲಿ ನಟಿ ಪ್ರಿಯಮಣಿ, ಶರೀಬ್ ಹಶ್ಮಿ, ಶ್ರೇಯಾ ಧನ್ವಂತರಿ ಮತ್ತು ಸನ್ನಿ ಹಿಂದೂಜಾ, ಶರದ್ ಕೇಲ್ಕರ್, ದರ್ಶನ್ ಕುಮಾರ್, ದಲಿಪ್ ತಾಹಿಲ್, ವಿಪಿನ್ ಕುಮಾರ್, ಸೀಮಾ ಬಿಸ್ವಾಸ್ ಮತ್ತು ದಿವಂಗತ ಆಸಿಫ್ ಬಾಸ್ರಾ ನಟಿಸಿದ್ದಾರೆ.