ETV Bharat / sitara

RHTDM ಚಿತ್ರಕ್ಕೆ 20ರ ಸಂಭ್ರಮ : ಬಿಟೌನ್​​​ನಲ್ಲಿ ಸಂಗೀತದ ಮೂಲಕವೇ ಹೊಸ ಟ್ರೆಂಡ್​​​​ ಹುಟ್ಟು ಹಾಕಿದ್ದ ಸಿನಿಮಾ ಇದು! - ಬಾಲಿವುಡ್​ ನಟ ಆರ್. ಮಾಧವನ್

ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 20 ವರ್ಷಗಳು ಕಳೆದಿವೆ!. ಇದು ಎಂತಹ ಅದ್ಭುತ ಪ್ರಯಾಣ. ಈ ಪ್ರಯಾಣದಲ್ಲಿ ಸವಾಲು, ಸಂತೃಪ್ತಿ, ಸಂತೋಷ ಎಲ್ಲವು ಸಿಕ್ಕಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಉದಾರತೆಗೆ ಧನ್ಯವಾದಗಳು. 'ರೆಹನಾ ಹೈ ತೇರೆ ದಿಲ್ ಮೇ' ತಂಡಕ್ಕೆ ದೊಡ್ಡ ಧನ್ಯವಾದಗಳು..

ರೆಹನಾ ಹೈ ತೇರೆ ದಿಲ್ ಮೇ
ರೆಹನಾ ಹೈ ತೇರೆ ದಿಲ್ ಮೇ
author img

By

Published : Oct 19, 2021, 7:25 PM IST

ಮುಂಬೈ(ಮಹಾರಾಷ್ಟ್ರ) : ಬಾಲಿವುಡ್​ ನಟ ಆರ್. ಮಾಧವನ್ ಹಾಗೂ ದಿಯಾ ಮಿರ್ಜಾ ಜೋಡಿಯಾಗಿ ನಟಿಸಿದ್ದ "ರೆಹನಾ ಹೈ ತೇರೆ ದಿಲ್ ಮೇ" (RHTDM) ಚಿತ್ರ ತೆರೆ ಕಂಡು ಇಂದಿಗೆ 20 ವರ್ಷಗಳು ಕಳೆದಿವೆ. ಚಿತ್ರತಂಡ 20ನೇ ವರ್ಷದ ವಾರ್ಷಿಕೋತ್ಸವ ಆಚರಿಸಿದೆ.

ಈ ಚಿತ್ರದ ಮೂಲಕ ಮಾಧವನ್ ಹಾಗೂ ದಿಯಾ ಮಿರ್ಜಾ ಜೋಡಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿತ್ತು. 2001ರಲ್ಲಿ ತೆರೆಕಂಡ ತಮಿಳು ಮಿನ್ನಾಲೆ ಚಿತ್ರದ ರಿಮೇಕ್​​ ಚಿತ್ರ ಇದಾಗಿತ್ತು. ಈ ಚಿತ್ರ ತನ್ನ ಸಂಗೀತದ ಮೂಲಕವೇ ಬಾಲಿವುಡ್​​ನಲ್ಲಿ ಹೊಸ ಸಂಚಲನ ಮೂಡಿಸಿತ್ತು. ದಿನ ಬೆಳಗಾಗುವುದೊರಳಗೆ ಮಾಧವನ್ ಹಾಗೂ ದಿಯಾ ಮಿರ್ಜಾ ಬಿಟೌನ್​ನಲ್ಲಿ ಸ್ಟಾರ್ ಪಟ್ಟ​​ ಅಲಂಕರಿಸಿದ್ದರು.

  • It’s been 20 years since my debut! What an amazing journey this has been. Humbling, gratifying, challenging. I hope to continue to learn and grow as an artist. Thank YOU all for your love and generosity. And a big thank you to Team Rehnaa Hai Terre Dil Mein ❤️🙏🏻 #20YearsOfRHTDM pic.twitter.com/Vitb2tiFwl

    — Dia Mirza (@deespeak) October 19, 2021 " class="align-text-top noRightClick twitterSection" data=" ">

ಈ ಚಿತ್ರವನ್ನ ಗೌತಮ್ ಮೆನನ್ ನಿರ್ದೇಶನ ಮಾಡಿದ್ದರು. ವಶು ಭಗ್ನಾನಿ ಪೂಜಾ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಈ ಚಿತ್ರವನ್ನ ನಿರ್ಮಾಣ ಮಾಡಿತ್ತು. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸಿದ್ದರೆ, ಗೀತ ರಚನೆಕಾರ ಸಮೀರ್ ಹಾಡುಗಳನ್ನು ಬರೆದಿದ್ದರು.

ತಾರಾಗಣದಲ್ಲಿ ಆರ್. ಮಾಧವನ್, ದಿಯಾ ಮಿರ್ಜಾ, ಸೈಫ್ ಅಲಿ ಖಾನ್ ಲೀಡ್​ ರೋಲ್​ನಲ್ಲಿ ನಟಿಸಿದರೆ, ಪೋಷಕ ಪಾತ್ರಗಳಲ್ಲಿ ಅನುಪಮ್ ಖೇರ್, ವ್ರಜೇಶ್ ಹಿರ್ಜಿ ಮತ್ತು ತನ್ನಜ್ ಇರಾನಿ ಸೇರಿದಂತೆ ಮುಂತಾದವರು ನಟಿಸಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ನಟಿ ದಿಯಾ ಮಿರ್ಜಾ, "ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 20 ವರ್ಷಗಳು ಕಳೆದಿವೆ!. ಇದು ಎಂತಹ ಅದ್ಭುತ ಪ್ರಯಾಣ. ಈ ಪ್ರಯಾಣದಲ್ಲಿ ಸವಾಲು, ಸಂತೃಪ್ತಿ, ಸಂತೋಷ ಎಲ್ಲವು ಸಿಕ್ಕಿದೆ.

ನಿಮ್ಮೆಲ್ಲರ ಪ್ರೀತಿ ಮತ್ತು ಉದಾರತೆಗೆ ಧನ್ಯವಾದಗಳು. 'ರೆಹನಾ ಹೈ ತೇರೆ ದಿಲ್ ಮೇ' ತಂಡಕ್ಕೆ ದೊಡ್ಡ ಧನ್ಯವಾದಗಳು #20YearsOfRHTDM ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.