ಹೈದರಾಬಾದ್: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ಡ್ರಗ್ ಕೇಸ್ನಲ್ಲಿ ಸಿಲುಕುವ ಮುನ್ನ ನಟಿ ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನೂ ಸಕ್ರಿಯವಾಗಿರುತ್ತಿರಲಿಲ್ಲ. ಆದರೆ ಎನ್ಸಿಬಿ ಬಂಧನದಿಂದ ಜಾಮೀನಿನ ಮೇಲೆ ಹೊರಬಂದಿರುವ ನಟಿ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಫುಲ್ ಬ್ಯುಸಿ ಆಗಿದ್ದು, 'ನಂಬಿಕೆ ಉಳಿಸಿಕೊಳ್ಳುವ' ಬಗ್ಗೆ ಹಂಚಿಕೊಂಡಿದ್ದಾರೆ.
![Reading Tagore is how Rhea Chakraborty is 'keeping the faith' up](https://etvbharatimages.akamaized.net/etvbharat/prod-images/11363277_dgh.jpg)
ಇಂದು ಬೆಳಗ್ಗೆ ಇನ್ಸ್ಟಾಗ್ರಾಮ್ನಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಕವನ ಸಂಕಲನ 'ಸಂಚಯಿತಾ' ಕೈಯಲ್ಲಿ ಹಿಡಿದಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. Keeping the Faith (ನಂಬಿಕೆಯನ್ನು ಉಳಿಸಿಕೊಳ್ಳುವುದು) ಎಂದು ಬರೆದು, "ಪ್ರಶ್ನೆ ಮತ್ತು ಅಳು, 'ಓಹ್, ಎಲ್ಲಿ?' ಸಾವಿರ ನದಿಗಳ ಕಣ್ಣೀರಿನಲ್ಲಿ ಕರಗಿ, 'ನಾನು!' ಎಂಬ ಭರವಸೆಯ ಪ್ರವಾಹದಿಂದ ಜಗತ್ತನ್ನು ಮುಳುಗಿಸಿದ ನಾನು" ಎಂಬ ಟ್ಯಾಗೋರ್ರ ಗೀತಾಂಜಲಿ ಕವನ ಸಂಕಲನದ ಸಾಲೊಂದನ್ನು ರಿಯಾ ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ರಿಯಾರ ಈ ಪೋಸ್ಟ್ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದ್ದು, ನಟಿಯ ಆಪ್ತರಲ್ಲಿ ಒಬ್ಬರಾದ ಶಿಬಾನಿ ದಾಂಡೇಕರ್ ಅವರು ಹಾರ್ಟ್ ಎಮೋಜಿಯೊಂದಿಗೆ 'ಲವ್ ಯು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಮಿತಾಬ್ ಬಚ್ಚನ್-ಇಮ್ರಾನ್ ಹಶ್ಮಿ ಅಭಿನಯದ 'ಚೆಹ್ರೆ' ಚಿತ್ರದಲ್ಲಿ ರಿಯಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಮತ್ತು ಟೀಸರ್ನಲ್ಲಿ ರಿಯಾ ಇರದ ಕಾರಣ ಚಿತ್ರತಂಡ ಇವರನ್ನು ಕೈಬಿಟ್ಟಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಟ್ರೈಲರ್ನಲ್ಲಿ ಇದು ಕೇವಲ ವದಂತಿ ಎಂಬುದು ಸಾಬೀತಾಗಿತ್ತು.