ETV Bharat / sitara

ಮನೆಯಲ್ಲೇ ಜಾಹೀರಾತು ಚಿತ್ರೀಕರಣ ನಡೆಸಿದ ರವೀನಾ ಟಂಡನ್ - ಪಿಪಿಇ ಕಿಟ್‌

ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ನಟಿ ರವೀನಾ ಟಂಡನ್ ಮುಂಬೈನ ತಮ್ಮ ನಿವಾಸದಲ್ಲಿ ಜಾಹೀರಾತು ಚಿತ್ರೀಕರಣ ನಡೆಸಿದರು. ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಕನಿಷ್ಠ ಸಿಬ್ಬಂದಿಗಳೊಂದಿಗೆ ಚಿತ್ರೀಕರಣ ನಡೆಯಿತು.

raveena
raveena
author img

By

Published : Jul 15, 2020, 10:36 AM IST

ಮುಂಬೈ: ನಟಿ ರವೀನಾ ಟಂಡನ್ ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ ಕೆಲಸ ನಿರ್ವಹಿಸಿದರು. ಅವರು ತಮ್ಮ ನಿವಾಸದಲ್ಲಿ ಜಾಹೀರಾತಿಗಾಗಿ ಚಿತ್ರೀಕರಣ ನಡೆಸಿದರು.

ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಕನಿಷ್ಠ ಸಿಬ್ಬಂದಿಯೊಂದಿಗೆ ಚಿತ್ರೀಕರಣ ನಡೆಯಿತು. ಕೋವಿಡ್-19 ಹಿನ್ನೆಲೆ ಕೇವಲ ಇಬ್ಬರು ಸಿಬ್ಬಂದಿಯೊಂದಿಗೆ ಚಿತ್ರೀಕರಣ ನಡೆಸಲಾಯಿತು.

"ಕೆಲಸದ ಸನ್ನಿವೇಶ ಬದಲಾಗಿದೆ. ಸೀಮಿತ ಸಿಬ್ಬಂದಿಗಳೊಂದಿಗೆ ನಾವು ಚಿತ್ರೀಕರಣ ನಡೆಸಿದೆವು. ಮನೆಯಲ್ಲೇ ಚಿತ್ರೀಕರಣ ನಡೆಸಿದ್ದು, ಕೇವಲ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಯಿತು. ಒಬ್ಬ ಕ್ಯಾಮರಾಮ್ಯಾನ್ ಮತ್ತು ಇನ್ನೊಬ್ಬ ಸೌಂಡ್ ರೆಕಾರ್ಡಿಸ್ಟ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು" ಎಂದು ರವೀನಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

raveena-tandon-shoot
ಚಿತ್ರೀಕರಣ ನಡೆಸಿದ ರವೀನಾ ಟಂಡನ್

"ಅವರು ಪಿಪಿಇ ಕಿಟ್‌ಗಳನ್ನು ಧರಿಸಿದ್ದರು. ಅವರು ಮನೆಯೊಳಗೆ ಪ್ರವೇಶಿಸುವ ಮೊದಲು ಅವರ ಎಲ್ಲ ಉಪಕರಣಗಳನ್ನ ಸೋಂಕು ರಹಿತಗೊಳಿಸಲಾಗಿತ್ತು. ನಾನು ಮತ್ತು ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇವೆ" ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.