ETV Bharat / sitara

ದಕ್ಷಿಣ ಭಾರತದ ಎಲ್ಲಾ ನಟಿಯರನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣ

ಟಾಲಿವುಡ್, ಬಾಲಿವುಡ್‌ ಹಾಗು ಕಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ 19.4 ಮಿಲಿಯನ್‌ಗೂ (1.94 ಕೋಟಿ) ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

author img

By

Published : Aug 11, 2021, 10:03 AM IST

Rashmika Mandanna
ರಶ್ಮಿಕಾ ಮಂದಣ್ಣ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮತ್ತು ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ. ತೆಲುಗು, ತಮಿಳಷ್ಟೇ ಅಲ್ಲದೆ ಹಿಂದಿಯಲ್ಲೂ ಬ್ಯುಸಿಯಾಗಿರುವ ರಶ್ಮಿಕಾ, ಇದೀಗ ಹೊಸ ಮೈಲಿಗಲ್ಲು ತಲುಪಿದ್ದಾರೆ.

ಹೌದು, ಈಗಾಗಲೇ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ತಮ್ಮ ಅಭಿನಯದ ಮೂಲಕ ಸಖತ್ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಟಾಲಿವುಡ್, ಬಾಲಿವುಡ್‌, ಕಾಲಿವುಡ್‌ನಲ್ಲೂ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ವಿಶೇಷ ಅಂದ್ರೆ, ರಶ್ಮಿಕಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 2 ಕೋಟಿಗೂ ಹೆಚ್ಚು ಫಾಲೋವರ್ಸ್​ ಇದ್ದು ಈ ವಿಚಾರವನ್ನು ಹೊಸ ಫೋಟೋ ಅಪ್ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ನಂಬರ್ 1 ಸ್ಥಾನದಲ್ಲಿ ರಶ್ಮಿಕಾ:

ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಫೋಟೋ, ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿರುವ ಈ ನಟಿ, ಇದೀಗ ದಕ್ಷಿಣ ಭಾರತದ ನಟಿಯರನ್ನೇ ಬೀಟ್ ಮಾಡಿ, ಇನ್‌ಸ್ಟಾಗ್ರಾಮ್​ನಲ್ಲಿ 2 ಕೋಟಿಗೂ ಹೆಚ್ಚು ಬೆಂಬಲಿಗರನ್ನು ಹೊಂದುವ ಮೂಲಕ ದಕ್ಷಿಣ ಭಾರತದಲ್ಲೇ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಸೆಲೆಬ್ರಿಟಿ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 1.9 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಕಾಜಲ್‌ ಅಗರ್ವಾಲ್‌ ಮೊದಲ ಸ್ಥಾನದಲ್ಲಿದ್ದರು.

ಅಂದಹಾಗೆ, ಈ ಸಂಭ್ರಮಕ್ಕೆ ಕೀರ್ತಿ ಸುರೇಶ್, ಎಲೀ ಅವ್‌ರಾಮ್‌, ಆಶಿಕಾ ರಂಗನಾಥ್, ಸಂಯುಕ್ತಾ ಹೊರನಾಡು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡಿ, ಶುಭಾಶಯ ತಿಳಿಸಿದ್ದಾರೆ.

ಇನ್ನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ 59.1 ಮಿಲಿಯನ್ ಬೆಂಬಲಿಗರನ್ನು ಹೊಂದಿದ್ದಾರೆ. ದಕ್ಷಿಣ ಭಾರತದ ಇತರೆ ಜನಪ್ರಿಯ ನಟರಾದ ಕೀರ್ತಿ ಸುರೇಶ್, ಪೂಜಾ ಹೆಗ್ಡೆ ಮತ್ತು ಸಮಂತಾ ಕ್ರಮವಾಗಿ 10 ಮಿಲಿಯನ್, 14.8 ಮಿಲಿಯನ್ ಮತ್ತು 18 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದು. ನಟ ತಮನ್ನಾ 14 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.