ಮುಂಬೈ : ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕ ಕಮ್ ನಿರ್ದೇಶಕ ರೋಹಿತ್ ಶೆಟ್ಟಿ ಮುಂಬರುವ ಹಾಸ್ಯವನ್ನೇ ಪ್ರಧಾನವಾಗಿರಿಸಿಕೊಂಡಿರುವ ಚಿತ್ರಕ್ಕಾಗಿ ಪರಸ್ಪರ ಕೈಜೋಡಿಸಲು ಮಾತುಕತೆ ನಡೆಸಿದ್ದಾರೆ. ಈ ಸಿನಿಮಾದಲ್ಲಿ ರೋಹಿತ್ ತಮ್ಮ ಗೋಲ್ಮಾಲ್ ಪ್ರಾಂಚೈಸ್ ಚಿತ್ರಗಳಿಗಿಂತ ದೊಡ್ಡ ಬಜೆಟ್‌ನ ಹೂಡಿಕೆ ಮಾಡಲು ಆಸಕ್ತರಾಗಿದ್ದಾರೆ.
ಚಿತ್ರರಂಗದಲ್ಲಿ ರೋಹಿತ್ ಮತ್ತು ರಣವೀರ್ ಪರಸ್ಪರ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿಂದೆ ತಾವಿಬ್ಬರೂ ಇನ್ನಷ್ಟು ದಿನಗಳ ಕಾಲ ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೇವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ, 2018ರಲ್ಲಿ ತೆರೆಕಂಡ ಸಿಂಬಾ ಸಿನಿಮಾದಲ್ಲಿ ಪೊಲೀಸ್ ಇಲಾಖೆ ಅಕ್ರಮವನ್ನು ಬಯಲಿಗೆಳೆದು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಗೆ ಭಾಜನರಾಗಿದ್ದರು.
ಇದೀಗ ತಮ್ಮ ಮುಂಬಲಿರುವ ಸೂರ್ಯವಂಶಿಯಲ್ಲಿ ನಟ ರಣವೀರ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದು, ಮುಂದಿನ ತಮ್ಮ ಹಾಸ್ಯ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೈಜೋಡಿಸಲಿದ್ದಾರೆ ಎಂದು ವರದಿ ತಿಳಿಸಿವೆ.
ವೆಬ್‌ಲಾಗ್ ವರದಿಯ ಪ್ರಕಾರ, ನಿರ್ಮಾಪಕರಾಗಿ ರೋಹಿತ್ ತಮ್ಮ ಗೋಲ್ಮಾಲ್ ಫ್ರಾಂಚೈಸ್ ಹಾಗೂ ಸಿಂಬಾ ಸಿನಿಮಾದಿಂದ ಹೊರಬರುವ ಗುರಿ ಹೊಂದಿದ್ದಾರೆ. ಅಷ್ಟೇ ಅಲ್ಲ, ಲಾಕ್‌ಡೌನ್ ಅವಧಿಯಲ್ಲಿ ಕಾಮಿಕ್ ಸ್ಕ್ರಿಪ್ಟ್‌ನ ಬರೆಯಲು ಸರಿಯಾದ ಸಮಯ ಬಳಸಿಕೊಂಡಿರುವ ರೋಹಿತ್ ಅವರ ಕಥಾಹಂದರವನ್ನು ಕೇಳಿದ ನಂತರ ರಣವೀರ್ ಈ ಸಿನಿಮಾಗೆ ಬರಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.