ಮುಂಬೈ : ಬಾಲಿವುಡ್ ನಟ ರಣ್ವೀರ್ ಸಿಂಗ್ ಇಂದು ತಮ್ಮ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಇಂದೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಮೂಲಕ ಶಾಲೆಗೆ ಕಂಪ್ಯೂಟರ್ ದಾನ ಮಾಡಿದ್ದಾರೆ.
ರಣ್ವೀರ್ ಕಾ ಫ್ಯಾನ್ ಕ್ಲಬ್ ಎಂಬ ಹೆಸರಿನ ಈ ಫ್ಯಾನ್ ಕ್ಲಬ್ 2015ರಿಂದ ಸಕ್ರಿಯವಾಗಿದೆ. ಇದರ ಸದಸ್ಯರು ಸ್ವಯಂಪ್ರೇರಿತವಾಗಿ ಕೆಲಸ ಮಾಡುತ್ತಾರೆ.
"ಈ ಶಾಲೆಯ ಮಕ್ಕಳು ಶಾಲೆಗೆ ಮರಳುವಾಗ ಕಂಪ್ಯೂಟರ್‌ಗಳನ್ನು ಕಂಡು ಅವರಲ್ಲಿ ಎಷ್ಟು ಉತ್ಸಾಹವಿರಬಹುದು ಎಂದು ಊಹಿಸಿ!" ಎಂದು ಅಭಿಮಾನಿ ಅಥರ್ವ ಖೇಂಡೇಕರ್ ಹೇಳಿದರು. ರಣ್ವೀರ್ ಕಾ ಫ್ಯಾನ್ ಕ್ಲಬ್ ಜನರಿಗೆ ಮತ್ತು ಮಕ್ಕಳಿಗೆ ಒಂದಲ್ಲ ಒಂದು ರೀತಿ ಸಹಾಯ ಮಾಡುತ್ತಿದೆ. ಅವುಗಳಲ್ಲಿ ಮೂಲಭೂತ ಶಿಕ್ಷಣಕ್ಕೆ ಸಹಾಯ ಮಾಡುವುದು ಕೂಡಾ ಒಂದಾಗಿದೆ.
"ಪ್ರತಿ ವರ್ಷ ರಣ್ವೀರ್ ಜನ್ಮದಿನದಂದು ಏನಾದ್ರೂ ಉತ್ತಮ ಕಾರ್ಯ ಮಾಡುತ್ತೇವೆ" ಎಂದು ಖೇಂಡೇಕರ್ ತಿಳಿಸಿದರು. "ಈ ಬಾರಿ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸಿಕಂದರಿ ಗ್ರಾಮದಲ್ಲಿರುವ ಶಾಲೆಗೆ ಕಂಪ್ಯೂಟರ್ ನೀಡಲಾಗಿದೆ. ಈ ಯೋಜನೆಯ ಒಟ್ಟು ಬಜೆಟ್ 30,000 ರೂ. ಆಗಿದೆ" ಎಂದು ಖೇಂಡೇಕರ್ ಹೇಳಿದರು.
ಕಳೆದ ವರ್ಷ ಈ ಫ್ಯಾನ್ ಕ್ಲಬ್ ಅಕೋಲಿ ಎಂಬ ಸಣ್ಣ ಹಳ್ಳಿಯಲ್ಲಿ ಸೌರ ದೀಪಗಳನ್ನು ಸ್ಥಾಪಿಸಿದೆ. ಅಲ್ಲಿನ ಗ್ರಾಮಸ್ಥರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಸೀಮೆಎಣ್ಣೆ ದೀಪಗಳನ್ನು ಬಳಸುತ್ತಿದ್ದರು.