ಮುಂಬೈ (ಮಹಾರಾಷ್ಟ್ರ): ಬಾಲಿವುಡ್ನಲ್ಲಿ ನೆಲೆಯೂರಿರುವ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಛತ್ರಿವಾಲಿ (Chhatriwali) ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಪೋಸ್ಟರ್ನಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
- " class="align-text-top noRightClick twitterSection" data="
">
ಕಾಂಡೋಮ್ ಪೋಸ್ಟರ್ ಹಿಡಿದು ಪೋಸ್ ನೀಡಿರುವ ನಟಿಯ ಫಸ್ಟ್ ಲುಕ್ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಛತ್ರಿವಾಲಿ ಚಿತ್ರವನ್ನು ರೋನಿ ಸ್ಕ್ರೂವಾಲಾ ಎಂಬುವರು ನಿರ್ಮಾಣ ಮಾಡುತ್ತಿದ್ದು, ನಟಿಯನ್ನು ಹಿಂದೆಂದೂ ನೋಡಿರದ ವಿಭಿನ್ನ ಪಾತ್ರದ ಮೂಲಕ ಪರಿಚಯಿಸಲಿದ್ದಾರೆ.
ಲಕ್ನೋದಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ನಟಿ ರಾಕುಲ್ ಪ್ರೀತ್ ಸಿಂಗ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಛತ್ರಿವಾಲಿ ಕೌಟುಂಬಿಕ ಹಾಗೂ ಮನರಂಜನಾತ್ಮಕ ಚಿತ್ರವಾಗಿದ್ದು, ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಪರೀಕ್ಷೆ ಮಾಡುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ತೇಜಸ್ ದಿಯೋಸ್ಕರ್ (Director Tejas Deoskar) ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ರಾಕುಲ್ ಪ್ರೀತ್ ಸಿಂಗ್, ನನ್ನ ಪಾತ್ರದ ಬಗ್ಗೆ ನನಗೂ ಅಚ್ಚರಿಯಾಗಿದೆ. ಈ ವರೆಗೆ ನಾನು ಇಂತಹ ಪಾತ್ರಕ್ಕೆ ಮುಂದಾಗಿರಲಿಲ್ಲ. ಮುಂಬರುವ ಪಾತ್ರಗಳ ಪರಿಚಯ ಮತ್ತು ಚಿತ್ರದ ಬಗ್ಗೆ ಉತ್ಸಾಹ ಹೆಚ್ಚಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Kangana's Freedom Comment: ಹೇಳಿಕೆ ತಪ್ಪೆಂದು ಸಾಬೀತಾದ್ರೆ ಕ್ಷಮೆಯಾಚಿಸುವೆ, ಪದ್ಮಶ್ರೀ ಹಿಂದಿರುಗಿಸುವೆ - ಕಂಗನಾ