ಹೈದರಾಬಾದ್ : ಬಾಲಿವುಡ್ ನ ಹಲವು ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್, ಇದೀಗ ಕಾಂಡೋಮ್ ಟೆಸ್ಟರ್ (condom tester) ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಇದರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಕಾಂಡೋಮ್ ಟೆಸ್ಟರ್ ಪಾತ್ರವನ್ನು ಮಾಡಲಿದ್ದು, ತಮ್ಮ ಪಾತ್ರದ ಬಗ್ಗೆ ಸಂತೋಷಗೊಂಡಿದ್ದರಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರಂತೆ.
ಇದು ಸಾಮಾಜಿಕ ಹಾಸ್ಯ ಚಿತ್ರವಾಗಿದ್ದು, ಸಾಮಾಜಿಕ ಸಂದೇಶವನ್ನು ನೀಡುತ್ತದೆ. ಈ ಚಿತ್ರವನ್ನು ರೋನಿ ಸ್ಕ್ರೂವಾಲಾ ನಿರ್ಮಿಸಲಿದ್ದಾರೆ ಎನ್ನಲಾಗಿದೆ.