ಮುಂಬೈ: ಬಿಗ್ಬಾಸ್ 14ರ ಸ್ಪರ್ಧಿ ರಾಖಿ ಸಾವಂತ್ ತಾಯಿಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಇದೇ ವಿಚಾರವಾಗಿ ಅಭಿಮಾನಿಗಳ ಬಳಿ ನಟ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಜಯಾ ಸಾವಂತ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದು, ಕಳೆದ ಕೆಲ ದಿನಗಳ ಹಿಂದೆ ರಿಯಾಲಿಟಿ ಶೋ ಬಿಗ್ ಬಾಸ್ 14ರ ಆವೃತ್ತಿಯಿಂದ ಹೊರ ಬಂದಿರುವ ನಟಿ ಅಭಿಮಾನಿಗಳ ಬಳಿ ತಮ್ಮ ತಾಯಿ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಮಗು ಸೇರಿ ಒಂದೇ ಕುಟುಂಬದ ಐವರ ಕೊಲೆ
ರಾಖಿ ಸಾವಂತ್ ತಾಯಿ ಸದ್ಯ ಕ್ಯಾನ್ಸರ್ಗೋಸ್ಕರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಶ್ಮೀ ದೇಸಾಯಿ ಇನ್ಸ್ಟಾಗ್ರಾಮ್ನಲ್ಲಿ ಹಾರ್ಟ್ ಇಮೋಜಿ ಹಾಕಿ, ಖಂಡಿತವಾಗಿ ಅವರು ಗುಣಮುಖರಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.