ಹರಿಯಾಣ ಮೂಲದ ನಟ ರಾಜ್‌ಕುಮಾರ್ ರಾವ್ (Actor Rajkummar Rao ) ತಮ್ಮಬಹು ಕಾಲದ ಗೆಳತಿ ಪತ್ರಲೇಖಾ (Patralekhaa) ಅವರೊಂದಿಗೆ ಸೋಮವಾರ (ನ.15) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಂಡೀಗಢದಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ದಂಪತಿಗಳ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರನ್ನು ಮಾತ್ರ ಆಹ್ವಾನಿಸಲಾಗಿತ್ತು. ಮುದುವೆ ಕುರಿತು ಸೋಷಿಯಲ್ ಮೀಡಿಯಾ ಮಾಹಿತಿ ಹಂಚಿಕೊಂಡಿರುವ ನಟ ರಾಜ್‌ಕುಮಾರ್ ರಾವ್, "11 ವರ್ಷಗಳ ಪ್ರೀತಿ, ಸ್ನೇಹ, ರೊಮ್ಯಾನ್ಸ್, ಹಾಸ್ಯದ ನಂತರ ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆಯಾದೆ. ನಿನ್ನ ಪತಿ ಎಂದು ಕರೆಸಿಕೊಳ್ಳುವುದಕ್ಕಿಂತ ಜಾಸ್ತಿ ಇನ್ನೇನೂ ಖುಷಿ ಇದೆ ಪತ್ರಲೇಖಾ" ಎಂದು ರಾಜ್‌ಕುಮಾರ್ ರಾವ್ ಮದುವೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ದಶಕಗಳಿಂದ ಪ್ರೀತಿ ಮಾಡುತ್ತಿದ್ದರು. ಕೊನೆಗೂ ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ದಂಪತಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: Viral video: ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಿಂದಿ ಹಾಡು ಈಗ ವೈರಲ್