ರಾಜ್ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಛಲಾಂಗ್' ಸಿನಿಮಾ ನವೆಂಬರ್ 13 ರಂದು ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಬಗ್ಗೆ ಕುರಿತಾದ ಈ ಸಿನಿಮಾವನ್ನು ನೋಡಲು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.
- " class="align-text-top noRightClick twitterSection" data="
">
ಈ ಚಿತ್ರದ ಬಗ್ಗೆ ಮಾತನಾಡಿರುವ ರಾಜ್ಕುಮಾರ್ ರಾವ್, ನಮ್ಮ ಸಿನಿಮಾ ಖಂಡಿತ ವೀಕ್ಷಕರನ್ನು ಮುಟ್ಟಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಜ್ಕುಮಾರ್ ರಾವ್ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ. ಜನರು ತಮ್ಮ ಜೀವನಕ್ಕೆ ಬಹಳ ಹತ್ತಿರವಾದ ವಿಚಾರಗಳನ್ನು ಹೊಂದಿರುವ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಅಂತಹ ಸಿನಿಮಾಗಳನ್ನು ನೋಡುವಾಗ ನಾವೂ ಕೂಡಾ ಈ ಚಿತ್ರದ ಒಂದು ಭಾಗ ಎಂಬ ಭಾವನೆ ವ್ಯಕ್ತಪಡಿಸುತ್ತಾರೆ. ಚಿತ್ರದ ಕಥೆಯನ್ನು ಹಾಸ್ಯಮಯವಾಗಿ ತೋರಿಸಲಾಗಿದ್ದು ನಿಜಕ್ಕೂ ನಮ್ಮ ಸಿನಿಮಾವನ್ನು ಜನರು ಇಷ್ಟಪಡುತ್ತಾರೆ.
- " class="align-text-top noRightClick twitterSection" data="
">
ನಿರ್ದೇಶನ ಹನ್ಸಲ್ ಅವರೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಸಂತೋಷದ ವಿಚಾರ. ಸೆಟ್ನಲ್ಲಿ ನಾವು ಬಹಳ ಎಂಜಾಯ್ ಮಾಡಿದ್ದೇವೆ. ನಮ್ಮಲ್ಲಿ ಉತ್ತಮ ಸಾಹಿತ್ಯವಿದೆ. ಇದನ್ನು ಉತ್ತಮ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಕೆಲಸ ಎಂದು ರಾಜ್ಕುಮಾರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಅಜಯ್ ದೇವಗನ್, ಲವ್ ರಂಜನ್, ಅಂಕುರ್ ಗರ್ಗ್, ಭೂಷಣ್ ಕುಮಾರ್ ಸೇರಿ ನಿರ್ಮಿಸಿರುವ ಈ ಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜ್ಕುಮಾರ್ಗೆ ನಾಯಕಿಯಾಗಿ ನುಸ್ರತ್ ಬರುಚ ನಟಿಸಿದ್ದಾರೆ. ಸೌರಭ್ ಶುಕ್ಲಾ, ಸತೀಶ್ ಕೌಶಿಕ್, ಇಳಾ ಅರುಣ್, ಜತಿನ್ ಶರ್ಮ ಹಾಗೂ ಇನ್ನಿತರರು ನಟಿಸಿದ್ದಾರೆ.