ETV Bharat / sitara

ಪತಿ ನಿಕ್​ ಜೊತೆ ಲಕ್ಷ್ಮೀ ಪೂಜೆ ಮಾಡಿದ ಪ್ರಿಯಾಂಕಾ: ನೆಟ್ಟಿಗರಿಂದ ಮೆಚ್ಚುಗೆ - ಪ್ರಿಯಾಂಕಾ ಛೋಪ್ರಾ

ದೀಪಾವಳಿ ಹಬ್ಬದ ಹಿನ್ನೆಲೆ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್​ ಜೋನಸ್ ಹಬ್ಬದ​ ಸಾಂಪ್ರದಾಯಿಕ ಬಟ್ಟೆ ಧರಿಸಿ ಲಕ್ಷ್ಮೀ ಪೂಜೆ ಮಾಡುತ್ತಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಇವನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

priyanka nick perform lakshmi puja
ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡಿದ ಪ್ರಿಯಾಂಕಾ
author img

By

Published : Nov 5, 2021, 12:11 PM IST

ಲಾಸ್​ ಏಂಜಲೀಸ್​(ಯುಎಸ್​): ನಟಿ ಪ್ರಿಯಾಂಕಾ ಛೋಪ್ರಾ ಭಾರತದಿಂದ ದೂರವಾಗಿ, ಅಮೆರಿಕದ ನಿಕ್​ ಜೋನಸ್​ರನ್ನು ಮದುವೆಯಾದರೂ ಕೂಡ ಭಾರತೀಯ ಸಂಪ್ರದಾಯವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ ಎಂಬುದಕ್ಕೆ ಈ ದೀಪಾವಳಿ ಹಬ್ಬದಂದು ಅವರು ಲಕ್ಷ್ಮೀ ಪೂಜೆ ನೆರವೇರಿಸಿದ್ದು ಸಾಕ್ಷಿಯಾಗಿದೆ.

ದೀಪಾವಳಿ ಹಬ್ಬದ ಹಿನ್ನೆಲೆ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್​ ಜೋನಸ್​ ಸಾಂಪ್ರದಾಯಿಕವಾದ ಬಟ್ಟೆ ಧರಿಸಿ ಲಕ್ಷ್ಮೀ ಪೂಜೆ ಮಾಡುತ್ತಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ, ಮಹಾಲಕ್ಷ್ಮೀಯ ಆಶೀರ್ವಾದ ನಮ್ಮ ಮೇಲೆ ಇರಲಿ. ಅವಳ ಕೃಪೆಯಿಂದ ಸುಖ, ಸಮೃದ್ಧಿ ನೆಲೆಸಲಿ. ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಹಳದಿ ಬಣ್ಣದ ಸೀರೆ ತೊಟ್ಟಿದ್ದರೆ, ನಿಕ್​ ಕಸೂತಿಯಿಂದ ಕೂಡಿದ ಬಿಳಿ ಕುರ್ತಾ ಧರಿಸಿದ್ದಾರೆ. ಸ್ಟಾರ್​ ದಂಪತಿಯ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.