ಪ್ರಿಯಾಂಕ ಚೋಪ್ರಾ ತಮ್ಮ ಪತಿ, ಪಾಪ್ ಗಾಯಕ ನಿಕ್ ಜೋನ್ಸ್ ಜೊತೆ ಲಾಸ್ ಏಂಜಲೀಸ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ಇರುವ ಕಾರಣ ಪಿಗ್ಗಿ ಈಗ ಬಹಳ ಫ್ರೀ ಇದ್ದಾರೆ, ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದಾರೆ.
ಇದೀಗ ಪ್ರಿಯಾಂಕ, ಪತಿ ನಿಕ್ ಜೋನ್ಸ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ಧಾರೆ. ಇವುಗಳಲ್ಲಿ ಪತಿ-ಪತ್ನಿ ಸಮುದ್ರ ತೀರದಲ್ಲಿ ಕುಳಿತಿರುವ ಸುಂದರ ಸಂಜೆಯ ಪೋಟೋ ಒಂದಿದ್ದರೆ ಮತ್ತೊಂದು ಪೋಟೋದಲ್ಲಿ ಇಬ್ಬರ ಕಾಲುಗಳನ್ನು ತೋರಿಸಲಾಗಿದೆ. ಇದರಲ್ಲಿ ಪ್ರಿಯಾಂಕ ಪಿಂಕ್ ಸಾಕ್ಸ್ ಧರಿಸಿದ್ದರೆ, ನಿಕ್ ಜೋನ್ಸ್ ಬಿಳಿ ಬಣ್ಣದ ಶೂ ಧರಿಸಿದ್ದಾರೆ. ಇವರೆಡೂ ಫೋಟೋಗಳ ಜೊತೆಗೆ ಫೈರ್ ಅ್ಯಂಡ್ ಐಸ್ ( ಬೆಂಕಿ ಹಾಗೂ ಮಂಜುಗಡ್ಡೆ) ಎಂದು ಕ್ಯಾಪ್ಷನ್ ನೀಡಿ ಮತ್ತೊಂದು ಪೋಟೋದೊಂದಿಗೆ ನಿಕ್ ಜೋನ್ಸ್ಗೆ ಟ್ಯಾಗ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ದಂಪತಿ ಇಬ್ಬರೂ ಚುಂಬಿಸುತ್ತಿರುವ ಪೋಟೋವೊಂದನ್ನು ಪ್ರಿಯಾಂಕ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಒಟ್ಟಿನಲ್ಲಿ 10 ವರ್ಷ ಕಿರಿಯನನ್ನು ಮದುವೆಯಾದಾಗ ಕಾಲೆಳೆದಿದ್ದ ಜನರ ಮುಂದೆ ಈ ದಂಪತಿ ನಾವಿಬ್ಬರೂ ಎಷ್ಟು ಪ್ರೀತಿಸುತ್ತಿದ್ದೇವೆ ಎಂದು ತೋರಿಸಿಕೊಟ್ಟಿದ್ಧಾರೆ.