ಹೈದರಾಬಾದ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಾಸ್ ಅವರೊಂದಿಗೆ ಹೋಳಿ ಹಬ್ಬವನ್ನು ಲಾಸ್ ಏಂಜಲೀಸ್ನಲ್ಲಿ ಭರ್ಜರಿಯಾಗಿ ಆಚರಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹೋಳಿ ಆಚರಣೆಯ ಫೋಟೋ,ವಿಡಿಯೋಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ, 'ಲಿಟ್ ಹೋಳಿ' ಎಂದು ಶೀರ್ಷಿಕೆ ನೀಡಿದ್ದಾರೆ. ಪ್ರೀಯಾಂಕಾ - ನಿಕ್ ಪರಸ್ಪರ ಬಣ್ಣ ಎರಚಿಕೊಂಡು ಕುಟುಂಬ ಸದಸ್ಯರೊಂದಿಗೆ ಹೋಳಿ ಸಂಭ್ರಮಿಸಿದ್ದಾರೆ.
- " class="align-text-top noRightClick twitterSection" data="
">
ಸ್ಟಾರ್ ಜೋಡಿಗೆ ಈ ಹೋಳಿ ವಿಶೇಷ. ಕಾರಣ, ಅವರು ಮೊದಲ ಬಾರಿಗೆ ಪುತ್ರಿಯೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ. ಇದು ಅವರ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತ್ತು. ಕಳೆದ ಜನವರಿ.22ರಂದು ಈ ಸ್ಟಾರ್ ಜೋಡಿ, ಬಾಡಿಗೆ ತಾಯ್ತನದ ಮೂಲಕ ಹೆಣ್ಣುಮಗುವೊಂದನ್ನು ಪಡೆದುಕೊಂಡಿದೆ.
ನಟನೆ ವಿಚಾರ ನೋಡುವುದಾದರೆ, ಪ್ರಿಯಾಂಕಾ ಕೊನೆಯದಾಗಿ ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಸಿಟಾಡೆಲ್ ಸೀರಿಸ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಟೆಕ್ಸ್ಟ್ ಫಾರ್ ಯೂ ಎಂಬ ಹಾಸ್ಯಭರಿತ ಸಿನಿಮಾದಲ್ಲೂ ಛಾಪು ಮೂಡಿಸಿದ್ದಾರೆ. ಸದ್ಯ ಹಾಲಿವುಡ್ ನಟ ಆಂಥೋನಿ ಮ್ಯಾಕಿ ಜೊತೆ ಎಂಡಿಂಗ್ ಥಿಂಗ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಬಾಲಿವುಡ್ನಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಭಾರತೀಯ ಮೂಲದ ವಾಣಿ ರಾಮನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮ್ಯಾಕ್ಸ್ವೆಲ್