ಮುಂಬೈ(ಮಹಾರಾಷ್ಟ್ರ) : ರಷ್ಯಾದ ಸೇನೆ ಉಕ್ರೇನ್ ಮೇಲೆ ದಾಳಿ ಮಾಡಿರುವುದು "ಭಯಾನಕ" ಎಂದು ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹೇಳಿದ್ದಾರೆ. ಅಲ್ಲಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಊಹಿಸುವುದು ಕಷ್ಟ ಎಂದು ಹೇಳಿದ್ದಾರೆ.
ಯುಎಸ್, ಯುರೋಪಿಯನ್ ಯೂನಿಯನ್, ಯುಕೆ ಮತ್ತು ಇತರ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಆದ್ರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದ್ಯಾವುದನ್ನೂ ಲೆಕ್ಕಿಸದೇ, ಯುದ್ಧದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ, ಬೇರೆ ದೇಶಗಳು ಇದರಲ್ಲಿ ಮಧ್ಯಪ್ರವೇಸಿದ್ರೆ ಎಂದಿಗೂ ನೋಡಿರದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.
UNICEF ಗುಡ್‌ವಿಲ್ ರಾಯಭಾರಿಯಾಗಿರುವ ಚೋಪ್ರಾ ಜೋನಾಸ್ ಅವರು, ಇನ್ಸ್ಟಾಗ್ರಾಮ್ನಲ್ಲಿ ಉಕ್ರೇನ್ ಬಿಕ್ಕಟ್ಟಿನ ಸುದ್ದಿ ಕ್ಲಿಪ್ಪಿಂಗ್ನ ಹಂಚಿಕೊಂಡಿದ್ದಾರೆ. "ಉಕ್ರೇನ್‌ನ ಪರಿಸ್ಥಿತಿಯು ಭಯಾನಕವಾಗಿದೆ. ಅಲ್ಲಿನ ಮುಗ್ಧ ಜನರು ಭಯದಿಂದ ಬದುಕುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ.
ಇದನ್ನು ಓದಿ: ರಾಜಧಾನಿಗೆ ರಷ್ಯಾದ 'ವಿಧ್ವಂಸಕ ಗುಂಪುಗಳ' ಎಂಟ್ರಿ - ಆದ್ರೂ, ಕೀವ್ನಲ್ಲೇ ಇರುವೆ ಎಂದ ಉಕ್ರೇನ್ ಅಧ್ಯಕ್ಷ
ಉಕ್ರೇನ್‌ನಲ್ಲಿರುವ ಮಕ್ಕಳಿಗೆ UNICEF ದೇಣಿಗೆ ನೀಡಿರುವ ಲಿಂಕ್ನನ್ನು ಸಹ ನಟಿ ಅಲ್ಲಿ ಲಗತ್ತಿಸಿದ್ದಾರೆ. ಆಧುನಿಕ ಜಗತ್ತಿನಲ್ಲಿ ಇಂತಹ ದುರಂತ ಹೇಗೆ ಉಲ್ಬಣಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ಯುದ್ಧಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅವರು ನಿಮ್ಮ ಮತ್ತು ನನ್ನಂತೆಯೇ ಮನುಷ್ಯರಿದ್ದಾರೆ. ಉಕ್ರೇನ್‌ನ ಜನರಿಗೆ ಹೇಗೆ ಸಹಾಯ ಮಾಡುವುದು ಎಂಬುದರ ಕುರಿತು ನನ್ನ ಬಯೋದಲ್ಲಿನ ಲಿಂಕ್‌ನಲ್ಲಿ ಹೆಚ್ಚಿನ ಮಾಹಿತಿ ಇದೆ ಎಂದು ಅವರು ಬರೆದಿದ್ದಾರೆ.