ETV Bharat / sitara

ಅಸ್ಸೋಂ ಪ್ರವಾಹಕ್ಕೆ ಮಿಡಿದ ಮನ: ಸಂಕಷ್ಟದಲ್ಲಿದ್ದವರಿಗೆ ದೇಣಿಗೆ ನೀಡಿದ ಪ್ರಿಯಾಂಕಾ - ನಿಕ್

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್​​​​ ಅವರು ಅಸ್ಸೋಂ ಪ್ರವಾಹ ಪರಿಹಾರಕ್ಕಾಗಿ ದೇಣಿಗೆ ನೀಡಿದ್ದಾರೆ ಮತ್ತು ಇತರರಿಗೂ ಮುಂದೆ ಬಂದು ರಾಜ್ಯದಲ್ಲಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವಂತೆ ಇದೇ ವೇಳೆ ಕೇಳಿಕೊಂಡಿದ್ದಾರೆ.

Priyanka Chopra, Nick Jonas contribute to Assam flood relief
ಅಸ್ಸಾಂ ಪ್ರವಾಹ ಪರಿಹಾರಕ್ಕೆ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಸ್ ಕೊಡುಗೆ
author img

By

Published : Jul 27, 2020, 2:49 PM IST

ಮುಂಬೈ(ಮಹಾರಾಷ್ಟ್ರ): ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್​ ಅವರು ಅಸ್ಸೋಂ ಪ್ರವಾಹ ಪರಿಹಾರಕ್ಕಾಗಿ ದೇಣಿಗೆ ನೀಡಿದ್ದಾರೆ ಮತ್ತು ಇತರರಿಗೂ ಮುಂದೆ ಬಂದು ರಾಜ್ಯದಲ್ಲಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

ಅಸ್ಸೋಂ ರಾಜ್ಯದಲ್ಲಿ ಮಾನ್ಸೂನ್ ಮಳೆಯಿಂದಾಗುತ್ತಿರುವ ಭೀಕರ ಪ್ರವಾಹಕ್ಕೆ ಸುಮಾರು 100 ಮಂದಿ ಬಲಿಯಾಗಿದ್ದಾರೆ. ಅತ್ತ ಸುಮಾರು 129 ಪ್ರಾಣಿಗಳು ಸಾವು ನೋವುಗಳನ್ನ ಅನುಭವಿಸುತ್ತಿವೆ.

ಈ ಸಂಬಂಧ ಟ್ವೀಟ್​ ಮಾಡಿರುವ ನಟಿ ಪ್ರಿಯಾಂಕ "ನಾವೆಲ್ಲರೂ ಜಾಗತಿಕ ಸಾಂಕ್ರಾಮಿಕ ಕೊರೊನಾದ ಪರಿಣಾಮಗಳ ಬಗ್ಗೆ, ನಿವಾರಣೆ, ನಿಯಂತ್ರಣಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ಭಾರತದ ಅಸ್ಸೋಂ ರಾಜ್ಯವು ಮತ್ತೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಭಾರಿ ಮಾನ್ಸೂನ್ ಮಳೆಯಿಂದಾಗುತ್ತಿರುವ ಪ್ರವಾಹದಿಂದ ಲಕ್ಷಾಂತರ ಜನರ ಜೀವನ ಧ್ವಂಸಗೊಂಡಿದೆ" ಹೀಗಾಗಿ ಸಾಧ್ಯವಾದಷ್ಟು ಮಂದಿ ಇವರ ನೆರವಿಗೆ ಧಾವಿಸಬೇಕು ಎಂದು ಬರೆದುಕೊಂಡಿದ್ದಾರೆ

ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ನಟ-ಕಂ-ಗಾಯಕ ನಿಕ್​ ಜೋನಸ್​​​ ಕೂಡ ಪೋಸ್ಟ್​ ಮಾಡಿ ರಾಜ್ಯದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕೆಲವು ಸಂಸ್ಥೆಗಳ ಹೆಸರನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನೆರವಿಗೆ ಧಾವಿಸಲು ಆಸಕ್ತಿ ಉಳ್ಳವರು ತಮ್ಮ ದೇಣಿಗೆಗಳನ್ನು ಕಳುಹಿಸಬಹುದು ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.