ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್ನಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರಂತೆ. ಈ ಅರಮನೆಗೆ ಬರೋಬ್ಬರಿ 141 ಕೋಟಿ ಖರ್ಚು ಮಾಡಿದ್ದಾರಂತೆ.
ಪಿಗ್ಗಿ, ನಿಕ್ ಜತೆ ಡೇಟಿಂಗ್ನಲ್ಲಿದ್ದಾಗ ಲಾಸ್ ಏಂಜಲೀಸ್ನಲ್ಲಿ ಸ್ವಂತ ಮನೆ ಹೊಂದಿದ್ದರು. ವೈಭೋಗದಿಂದ ಕೂಡಿದ್ದ ಈ ಮನೆಯನ್ನು ಮದುವೆ ನಂತರ ₹48.91 ಕೋಟಿಗೆ ಮಾರಾಟ ಮಾಡಿದ್ದರು. ಈಗ ಅಲ್ಲಿಯೇ ಮತ್ತೊಂದು ಮನೆ ಖರೀದಿಸಿದ್ದಾರಂತೆ. ಇದರ ಬೆಲೆ ಬರೋಬ್ಬರಿ 20 ಮಿಲಿಯನ್ ಡಾಲರ್ ಅಂದ್ರೆ ಸುಮಾರು ₹ 141 ಕೋಟಿ ಎನ್ನಲಾಗಿದೆ.
ಕಳೆದ ವರ್ಷವಷ್ಟೇ ಸಪ್ತಪದಿ ತುಳಿದಿರುವ ಪ್ರಿಯಾಂಕಾ ಹಾಗೂ ನಿಕ್ ವಿದೇಶಗಳ ಸುತ್ತಾಟದಲ್ಲಿದ್ದಾರೆ. ಈಗ ಲಾಸ್ ಏಂಜಲೀಸ್ನಲ್ಲಿ ಹೊಸ ಮನೆ ಖರೀದಿಸಿದ್ದು, ಅಲ್ಲಿಯೇ ಸೆಟ್ಲ್ ಆಗುವ ಪ್ಲ್ಯಾನ್ ಹೊಂದಿದ್ದಾರೆ ಎನ್ನಲಾಗುತ್ತಿದೆ.