ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಇಂದು 55ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಹಿನ್ನೆಲೆ ಶಾರುಖ್ಗೆ ದೇಶ ವಿದೇಶದಿಂದಲೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇನ್ನು ಕೋವಿಡ್ ನಡುವೆ ಅವರ ಮುಂಬೈ ‘ಮನ್ನತ್’ ನಿವಾಸದ ಮುಂಭಾಗದಲ್ಲಿ ಅಭಿಮಾನಿಗಳು ಸೇರದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ರಾತ್ರಿ ಮನ್ನತ್ ಬಂಗೆಲೆಯ ಬಳಿ ಐದಾರು ಮಂದಿ ಸ್ನೇಹಿತರು ಒಟ್ಟು ಸೇರಿ ಶಾರುಖ್ಗೆ ಬರ್ತ್ ಡೇ ವಿಶ್ ಮಾಡಲು ಜಮಾಯಿಸಿದ್ದರು. ಇದೀಗ ಸಾವಿರಾರು ಮಂದಿ ಶಾರುಖ್ ಕಾಣಲು ಕಿಕ್ಕಿರಿದು ಸೇರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ಹುಟ್ಟುಹಬ್ಬದ ಹಿನ್ನೆಲೆ ಅಕ್ಟೋಬರ್ 27ರಂದು ಶಾರುಖ್ ಟ್ವೀಟ್ ಮಾಡಿ ಕೊರೊನಾ ಹಿನ್ನೆಲೆ ಮನೆಯ ಬಳಿ ಯಾರು ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.