ಮುಂಬೈ: ಸಿನಿಮಾ ಚಿತ್ರೀಕರಣಕ್ಕಾಗಿ ಬಂದು, ಅನುಮತಿ ಇಲ್ಲದೇ ರಸ್ತೆಯಲ್ಲಿ ನಿಂತಿದ್ದ ವಾಹನಗಳನ್ನು ಸಂಚಾರಿ ಪೊಲೀಸರು ಲಾಕ್ ಮಾಡಿದ್ದ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಚಿತ್ರೀಕರಣದ ವೇಳೆ ವ್ಯಾನ್ ಹಾಗೂ ಇತರೆ ವಾಹನಗಳು ಪರವಾನಗಿ ಇಲ್ಲದೇ ರಸ್ತೆಯಲ್ಲಿ ನಿಂತಿದ್ದವು. ಅನಧಿಕೃತವಾಗಿ ನಿಲುಗಡೆ ಮಾಡಿದ 20 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಪೊಲೀಸರ ಪ್ರಕಾರ, ವಾಹನಗಳನ್ನು ಲಾಕ್ ಮಾಡುವ ವೇಳೆ ಅಕ್ಷಯ್ ಕುಮಾರ್ ಸ್ಥಳದಲ್ಲಿ ಇರಲಿಲ್ಲ. ಅವರು ಆಗ ತಾನೇ ಶೂಟಿಂಗ್ ಮುಗಿಸಿ ತೆರಳಿದ್ದರು. ಅಕ್ರಮವಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಕುರಿತು ಟ್ವಿಟರ್ ಮೂಲಕ ದೂರು ಬಂದಿದ್ದು, ಈ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: 'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಇಂದು ಬಿಡುಗಡೆ