ನವದೆಹಲಿ : ಬಾಲಿವುಡ್ ನಟ ಟೈಗರ್ ಶ್ರಾಫ್ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ 'ವಂದೇ ಮಾತರಂ' ಹಾಡನ್ನು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಟೈಗರ್ ಶ್ರಾಫ್ ವಿಡಿಯೋ ಸಾಂಗ್ ಜೊತೆಗೆ, 'ವಂದೇ ಮಾತರಂ.. ಇವು ಕೇವಲ ಪದಗಳಲ್ಲ, ಭಾವನೆಗಳು. ನಮ್ಮ ರಾಷ್ಟ್ರಕ್ಕೆ ಕೊಡುಗೆ ನೀಡಲು ನಮ್ಮನ್ನು ಪ್ರೇರೇಪಿಸುವ ಭಾವನೆಗಳು. ಈ ಸ್ವಾತಂತ್ರ್ಯ ದಿನಾಚರಣೆಯಂದು 130 ಕೋಟಿ ಭಾರತೀಯರಿಗೆ ಈ ವಿಡಿಯೋವನ್ನು ಅರ್ಪಿಸುವ ಸಣ್ಣ ಪ್ರಯತ್ನ' ಎಂದು ಸಾಂಗ್ ಜೊತೆಗೆ ಟ್ವೀಟ್ ಮಾಡಿದ್ದರು.
ಈ ವಿಡಿಯೋಗೆ ಶ್ಲಾಘನೆ ವ್ಯಕ್ತಪಡಿಸಿರುವ ಪ್ರಧಾನಿ, 'ಸೃಜನಶೀಲ ಪ್ರಯತ್ನ.. ವಂದೇ ಮಾತರಂ ಬಗ್ಗೆ ನೀವು ಹೇಳಿರುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ!' ಎಂದು ರಿಟ್ವೀಟ್ ಮಾಡಿದ್ದಾರೆ.
-
शुभकामनाओं के लिए आपका हृदय से आभार @mangeshkarlata दीदी। आपके आशीर्वाद से मुझे हमेशा एक नई ऊर्जा मिलती है। https://t.co/Vp6ql9hHLS
— Narendra Modi (@narendramodi) August 15, 2021 " class="align-text-top noRightClick twitterSection" data="
">शुभकामनाओं के लिए आपका हृदय से आभार @mangeshkarlata दीदी। आपके आशीर्वाद से मुझे हमेशा एक नई ऊर्जा मिलती है। https://t.co/Vp6ql9hHLS
— Narendra Modi (@narendramodi) August 15, 2021शुभकामनाओं के लिए आपका हृदय से आभार @mangeshkarlata दीदी। आपके आशीर्वाद से मुझे हमेशा एक नई ऊर्जा मिलती है। https://t.co/Vp6ql9hHLS
— Narendra Modi (@narendramodi) August 15, 2021
ಇದೇ ವೇಳೆ, ಬಂಕೀಮ್ ಚಂದ್ರ ಚಟರ್ಜಿಯವರು ಬರೆದ ‘ವಂದೇ ಮಾತರಂ’ ಗೀತೆ ಹಾಡಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಪ್ರಧಾನಿ ಮೋದಿಯವರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಇದಕ್ಕೂ ಕೂಡ ಮೋದಿ ರಿಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
-
Creative effort. Fully agree with what you say about Vande Mataram! https://t.co/we0PufWryY
— Narendra Modi (@narendramodi) August 15, 2021 " class="align-text-top noRightClick twitterSection" data="
">Creative effort. Fully agree with what you say about Vande Mataram! https://t.co/we0PufWryY
— Narendra Modi (@narendramodi) August 15, 2021Creative effort. Fully agree with what you say about Vande Mataram! https://t.co/we0PufWryY
— Narendra Modi (@narendramodi) August 15, 2021
ನಟ ಟೈಗರ್ ಶ್ರಾಫ್ 'ವಂದೇ ಮಾತರಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಈ ಹಾಡಿಗಾಗಿ ಸ್ವತಃ ಪ್ರಧಾನಿಯವರಿಂದ ಪ್ರಶಂಸೆ ಪಡೆದಿದ್ದಾರೆ. ಮ್ಯೂಸಿಕ್ ಜತೆಗೆ ಈ ವಿಡಿಯೋದಲ್ಲಿ ವಂದೇ ಮಾತರಂ ಹಾಡು ವಿಭಿನ್ನ ಹಾಗೂ ಆಕರ್ಷಕವಾಗಿ ಮೂಡಿ ಬಂದಿದೆ. ಟೈಗರ್ ತಮ್ಮ ಅದ್ಭುತ ಡ್ಯಾನ್ಸ್ನಿಂದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಜನ್ಮ ಜನ್ಮ ಜತೆಗಿರುವ 'ನಾತಿಚರಾಮಿ' ನೀಡಿ ಅಖಿಲಾ ಜೊತೆ ಸಪ್ತಪದಿ ತುಳಿದ ನಿರ್ದೇಶಕ ಮಂಸೋರೆ..