ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕೈಗೊಂಡಿದ್ದ ಐತಿಹಾಸಿಕ ಯೋಜನೆ ಮಂಗಳಯಾನ ಇದೀಗ ಸಿನಿಮಾವಾಗಿ ಮೂಡಿಬಂದಿದ್ದು, ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
'ಮಿಷನ್ ಮಂಗಳ' ಹೆಸರಿನ ಈ ಚಿತ್ರ ಇಸ್ರೋ ಅದ್ಭುತ ಸಾಧನೆಯನ್ನು ಕಟ್ಟಿಕೊಡಲಿದ್ದು, ಟ್ರೇಲರ್ ರಿಲೀಸ್ ವೇಳೆ ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರಾ ಎನ್ನುವ ಪ್ರಶ್ನೆಗೆ ನಟ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

'ಮಿಷನ್ ಮಂಗಳ' ಚಿತ್ರದಲ್ಲಿ ಪ್ರಧಾನಿ ಮೋದಿ ನಟಿಸಿದ್ದಾರಾ ಎನ್ನುವ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಕುಮಾರ್, "ಯಾವುದೇ ಗಾಳಿಸುದ್ದಿಯನ್ನು ನಂಬಬೇಡಿ, ಒಂದು ವೇಳೆ ಮೋದಿ ನಟಿಸುತ್ತಿದ್ದರೆ ನಾನೇ ಸ್ವತಃ ನಿಮ್ಮೆಲ್ಲರಿಗೂ ತಿಳಿಸುತ್ತೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಬಹುತಾರಾಗಣದ 'ಮಿಷನ್ ಮಂಗಳ' ಚಿತ್ರದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು,ನಿತ್ಯಾ ಮೆನನ್, ಕೃತಿ ಕುಲ್ಹಾರಿ, ಸೋನಾಕ್ಷಿ ಸಿನ್ಹಾ,ದತ್ತಣ್ಣ ಹಾಗೂ ಶರ್ಮನ್ ಜೋಶಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ತೆರೆಗೆ ಬರಲಿದೆ.