'ರಾಧಾ ಕೃಷ್ಣ' ಸೀರಿಯಲ್ನಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಸುಮೇದ್ ಮುದ್ಗಲ್ಕರ್, ತುಂಬ ಕಡಿಮೆ ಸಮಯದಲ್ಲಿ ಜನರ ಮನಸ್ಸು ಗೆದ್ದಿದ್ದರು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿರುವ ಈ ನಟ, ನಮ್ಮ ಮುಂದಿನ ಧಾರಾವಾಹಿ ಕುರಿತು ತಿಳಿಸಿದ್ದಾರೆ.
ಸುಮೇದ್ ಮುದ್ಗಲ್ಕರ್ ಅವರು ಮುಂಬರುವ 'ಹಾಥಿ ಘೋಡಾ ಪಾಲ್ಕಿ ಜೈ ಕನ್ನಯ್ಯ ಲಾಲ್ ಕಿ' ಧಾರಾವಾಹಿಯಲ್ಲಿ ಬಣ್ಣಹಚ್ಚಿದ್ದು, 'ಭಗವಾನ್ ವಿಷ್ಣು' ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರವಾಹಿಯ 'ತುಂಟ ಬಾಲ ಕೃಷ್ಣ'ನ ಕತೆಯನ್ನು ಒಳಗೊಂಡಿದ್ದು, ಪ್ರೇಕ್ಷಕರಿಗೆ ಅದ್ಭುತ ಪೌರಾಣಿಕದ ಅನುಭವದ ನೀಡುವುದರಲ್ಲಿ ಅನುಮಾನವಿಲ್ಲ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಸುಮೇದ್ ಮುದ್ಗಲ್ಕರ್, ''ಸೀರಿಯಲ್ ಸೆಟ್ನಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವುದು ನನಗೆ ವಿಶೇಷ ಅನುಭವ ನೀಡುತ್ತದೆ. ಮಕ್ಕಳು ಮುಗ್ಧರು, ಅವರಿಂದಲೂ ಸಹ ಕಲಿಯುವುದು ತುಂಬಾ ಇದೆ. ಅವರು ಮಾಡುವ ಪ್ರತಿಯೊಂದು ಕೆಲಸವೂ ನಮಗೆ ಉತ್ತಮ ಉದಾಹರಣೆ. ಈ ಅವಕಾಶ ನೀಡಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದೆಲ್ಲವೂ ಆಶೀರ್ವಾದದಂತೆ ಭಾಸವಾಗುತ್ತದೆ " ಎಂದಿದ್ದಾರೆ.
'ಹಾಥಿ ಘೋಡಾ ಪಾಲ್ಕಿ ಜೈ ಕನ್ನಯ್ಯ ಲಾಲ್ ಕಿ' ಧಾರಾವಾಹಿ ಇದೇ ಅಕ್ಟೋಬರ್ 19 ರಿಂದ ಸ್ಟಾರ್ ಭಾರತ್ನಲ್ಲಿ ಆರಂಭವಾಗಲಿದೆ.
'ದಿಲ್ ದೋಸ್ತಿ ನೃತ್ಯ', 'ಡಾನ್ಸ್ ಇಂಡಿಯಾ ಡಾನ್ಸ್ 4' ರಿಯಾಲಿಟಿ ಶೋ, 'ಚಕ್ರವರ್ತಿ ಅಶೋಕ ಸಾಮ್ರಾಟ', 'ರಾಧಾ ಕೃಷ್ಣ' ಧಾರಾವಾಹಿ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಸುಮೇದ್ ಹೆಸರುವಾಸಿಯಾಗಿದ್ದಾರೆ.