ಹೈದರಾಬಾದ್ : ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೋರ್ 1966ರಲ್ಲಿ ಮ್ಯಾಗ್ಸಿನ್ವೊಂದರ ಮುಖಪುಟದ ವಿನ್ಯಾಸಕ್ಕಾಗಿ ಬಿಕಿನಿ ಧರಿಸಿ ಫೋಸ್ ನೀಡಿದ್ದರು. ಈ ಫೋಟೊ ಆಗಿನ ಕಾಲದಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಸಹ ಭಾರತದಲ್ಲಿ ಬಿಕಿನಿ ಧರಿಸಿದ ಮೊದಲ ನಟಿ ಎಂಬ ಹೆಸರು ತಂದಿತ್ತು. ಶರ್ಮಿಳಾ ಅಂದು ಬಿಕಿನಿ ಧರಿಸಿ ತೆಗೆಸಿದ್ದ ಫೋಟೋ, ಇಂದೂ ಸಹ ರಸಿಕರ ಮನ ಬೆಚ್ಚಗಾಗಿಸುತ್ತೆ.
ಪ್ರಸಿದ್ದ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಕೃಪಾಕಟಾಕ್ಷದಿಂದ ಚಿತ್ರರಂಗಕ್ಕೆ ಕಾಲಿರಿಸಿದ್ದ ಶರ್ಮಿಳಾ, ಬಾಲಿವುಡ್‌ನ ಹಲವಾರು ಯಶಸ್ವಿ ಚಿತ್ರಗಳಾದ ಆರಾಧನಾ, ಕಾಶ್ಮೀರ ಕಿ ವಾಲಿ, ಚುಪ್ಕೆ ಚುಪ್ಕೆ, ಅಮರ್ ಪ್ರೇಮ್ ಸೇರಿ ಇನ್ನು ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಈ ಎಲ್ಲಾ ಸಿನಿಮಾಗಳಿಗಿಂತ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಹೆಚ್ಚು ಮುನ್ನಲೆಗೆ ಬಂದಿತ್ತು.
ಇತ್ತೀಚಿಗೆ ಈ ಬಗ್ಗೆ ನಟಿ ಶರ್ಮಿಳಾ ಪ್ರತಿಕ್ರಿಯಿಸಿದ್ದು, ಅತ್ಯಂತ ಸಂಪ್ರದಾಯವಾಗಿದ್ದ ಸಮಯದಲ್ಲಿ ನಾನು ಫೋಟೋಶೂಟ್‌ಗಾಗಿ ಬಿಕಿನಿ ಧರಿಸಲು ಧೈರ್ಯ ಮಾಡಿದ್ದೆ. ನನ್ನ ಮದುವೆಗೂ ಸ್ವಲ್ಪ ಸಮಯದ ಮುಂಚೆ ನಾನು ಈ ಫೋಟೋಶೂಟ್ನಲ್ಲಿ ಭಾಗಿಯಾಗಿದ್ದೆನು. ನಾನು ಧರಿಸಬೇಕಿದ್ದ ಎರಡು ತುಂಡಿನ ಬಿಕಿನಿ ಬಟ್ಟೆಯನ್ನು ನನ್ನ ಛಾಯಾಗ್ರಹಕನಿಗೆ ತೋರಿಸಿದಾಗ ಅವರೂ ಕೂಡ ಒಮ್ಮೆ ಬೆರಗಾಗಿದ್ದರು ಎಂದು 60ರ ದಶಕದ ನೆನಪನ್ನು ಮತ್ತೊಮ್ಮೆ ಶರ್ಮಿಳಾ ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಫೋಟೋಶೂಟ್ಗೂ ಮುನ್ನ ನನ್ನ ಫೋಟೋಗ್ರಾಫರ್ ಈ ಉಡುಗೆ ತೊಡಲು ನೀವು ಸಿದ್ದರಿದ್ದೀರಾ ಎಂದು ಹಲವು ಬಾರಿ ಪ್ರಶ್ನಿಸಿದ್ದರು. ಬಿಕಿನಿ ಧರಿಸಿದ್ದಕ್ಕಾಗಿ ನನಗಿಂತ ಅವರೇ ಹೆಚ್ಚು ಚಿಂತಿತರಾಗಿದ್ದರು ಎಂದು ಶರ್ಮಿಳಾ ಅಂದು ನಡೆದ ಪ್ರಸಂಗದ ಬಗ್ಗೆ ವಿವರಿಸಿದ್ದಾರೆ.