ETV Bharat / sitara

ತಮ್ಮ ಆತ್ಮಚರಿತ್ರೆ 'ಅನ್​​​ ಫಿನಿಷ್ಡ್' ನಲ್ಲಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡ ಪಿಗ್ಗಿ - ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ

ತಾವು ಬರೆಯುತ್ತಿರುವ 'ಅನ್​​​ ಫಿನಿಷ್ಡ್' ಆತ್ಮಚರಿತ್ರೆಯಲ್ಲಿ ಇರುವ ಕೆಲವೊಂದು ಫೋಟೋಗಳನ್ನು ಪ್ರಿಯಾಂಕ ಛೋಪ್ರಾ ತಮ್ಮ ಇನ್ಟ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ತಾನು ಆತ್ಮಚರಿತ್ರೆ ಬರೆಯುವುದಾಗಿ ಪಿಗ್ಗಿ 2018 ರಲ್ಲಿ ಹೇಳಿಕೊಂಡಿದ್ದರು. ​​

priyanka chopra unfinished
'ಅನ್​​​ ಫಿನಿಷ್ಡ್'
author img

By

Published : Sep 30, 2020, 3:31 PM IST

ನವದೆಹಲಿ: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಜೋನ್ಸ್ ಇನ್ಸ್ಟಾಗ್ರಾಮ್​​​ನಲ್ಲಿ ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ 'ಅನ್​​ ಫಿನಿಷ್ಡ್'ನಿಂದ ಆಯ್ದ ಫೋಟೋಗಳ ವಿಡಿಯೋ ತುಣುಕು ಇರುವ ಮೂರು ಪೋಸ್ಟ್​​​​​ಗಳನ್ನು ಹಂಚಿಕೊಂಡಿದ್ದಾರೆ.

ಮೊದಲನೆ ವಿಡಿಯೋದಲ್ಲಿ 2000 ರಲ್ಲಿ ಪ್ರಿಯಾಂಕ ಮಿಸ್ ವರ್ಲ್ಡ್ ಕಿರೀಟ ಗೆದ್ದಾಗ ತೆಗೆದ ಫೋಟೋ ಹಾಗೂ ಬಾಲ್ಯದಲ್ಲಿದ್ದಾಗ ತೆಗೆದ ಫೋಟೋ ಇದೆ. ಎರಡನೇ ವಿಡಿಯೋದಲ್ಲಿ ವಿದೇಶದಲ್ಲಿ ದೊಡ್ಡ ಕಟ್ಟಡಗಳ ಮುಂದಿನ ರಸ್ತೆಯಲ್ಲಿ ನಿಂತಿರುವ ಹಳೆಯ ಫೋಟೋ ಹಾಗೂ 4 ಗಂಟೆಗಳ ಹಿಂದೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಪ್ರಿಯಾಂಕಾಗೆ 'ಒಂದು ವೇಳೆ ನಿಮ್ಮ ಜೀವನ ಪುಸ್ತಕವಾದರೆ ಅದಕ್ಕೆ ಏನೆಂದು ಹೆಸರಿಡುತ್ತೀರಿ..?' ಎಂದು ಕೇಳಿದ್ದಾರೆ ಇದಕ್ಕೆ ಪ್ರಿಯಾಂಕ 'ಅನ್​​ ಫಿನಿಷ್ಡ್​ ಎಂದು ಉತ್ತರಿಸಿದ್ದಾರೆ.

ಈ ಪೋಸ್ಟ್​​​ಗಳಿಗೆ ಏನೂ ಕ್ಯಾಪ್ಷನ್ ನೀಡದೆ #unfinished ಎಂದಷ್ಟೇ ಪಿಗ್ಗಿ ಬರೆದುಕೊಂಡಿದ್ದಾರೆ. ತಾನು ಆತ್ಮಚರಿತ್ರೆ ಬರೆಯುತ್ತಿರುವುದಾಗಿ ಪಿಗ್ಗಿ 2018 ರಲ್ಲಿ ಹೇಳಿಕೊಂಡಿದ್ದರು. ಪ್ರಿಯಾಂಕ ಅವರ ಬಾಲ್ಯ, ವೈಯಕ್ತಿಕ ಜೀವನ, ಸಿನಿಮಾ ಕರಿಯರ್ ಸೇರಿದಂತೆ ಇನ್ನಿತರ ವಿಚಾರಗಳನ್ನು ಈ ಪುಸ್ತಕ ಒಳಗೊಂಡಿದೆ. ಪ್ರಿಯಾಂಕ ಕೇವಲ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ, ಗಾಯಕಿಯಾಗಿ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಭಿಮಾನಿಗಳು ಪ್ರೀತಿಯ ಪಿಗ್ಗಿಯ ಆತ್ಮಚರಿತ್ರೆ ಓದಲು ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.