ETV Bharat / sitara

ಪರ್ಲ್​ ಪುರಿ ವಿರುದ್ಧ ಅತ್ಯಾಚಾರ ಆರೋಪ: ನಟನ​ ಬೆಂಬಲಿಸಿ ನಿರ್ದೇಶಕಿ ದಿವ್ಯಾ ಖೋಸ್ಲಾ ಪೋಸ್ಟ್​​ - ನಾಗಿನ್ 3 ಖ್ಯಾತಿಯ ನಟ ಬಂಧನ

ಅತ್ಯಾಚಾರದ ಆರೋಪ ಹಿನ್ನೆಲೆ ನ್ಯಾಯಾಂಗ ಬಂಧನದಲ್ಲಿರುವ ಹಿಂದಿಯ ನಾಗಿನ್ 3 ಧಾರಾವಾಹಿ ಖ್ಯಾತಿಯ ನಟ ಪರ್ಲ್ ವಿ ಪುರಿಗೆ ನಿರ್ದೇಶಕಿ ದಿವ್ಯಾ ಖೋಸ್ಲಾ ಕುಮಾರ್ ತಮ್ಮ ಬೆಂಬಲ ನೀಡಿದ್ದಾರೆ. ತಮ್ಮ ಇನ್ಸ್​ಟಾಗ್ರಾಮ್​ ಖಾತೆಯಲ್ಲಿ ಪರ್ಲ್ ಉತ್ತಮ ಮತ್ತು ನೈತಿಕ ಮೌಲ್ಯವುಳ್ಳ ವ್ಯಕ್ತಿಯೆಂದು ದಿವ್ಯಾ ಹೊಗಳಿದ್ದಾರೆ.

author img

By

Published : Jun 8, 2021, 5:40 PM IST

ಹೈದರಾಬಾದ್​: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಹಿಂದಿ ಕಿರುತೆರೆ ನಟ ಪರ್ಲ್ ವಿ ಪುರಿಯವರನ್ನು ಬಂಧಿಸಲಾಗಿದೆ. ಈ ನಟನಿಗೆ ನಟಿ-ನಿರ್ದೇಶಕಿ ದಿವ್ಯಾ ಖೋಸ್ಲಾ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ಸೂಚಿಸಿದ್ದಾರೆ.

ಈ ಮೊದಲು ಏಕ್ತಾ ಕಪೂರ್, ಅನಿತಾ ಹಸಾನಂದಾನಿ, ನಿಯಾ ಶರ್ಮಾ ಮತ್ತು ಇತರ ಬಾಲಿವುಡ್​ ಸೆಲೆಬ್ರೆಟಿಗಳು ಪರ್ಲ್ ಅವರನ್ನು ಬೆಂಬಲಿಸಿ ಫೋಸ್ಟ್​ ಹಾಕಿದ್ದರು. ಈಗ ದಿವ್ಯಾ ಕೂಡ ಪರ್ಲ್‌ಗೆ ತನ್ನ ಬೆಂಬಲ ಸೂಚಿಸಿದ್ದು, ಇನ್‌ಸ್ಟಾಗ್ರಾಮ್‌ ಮೂಲಕ ಘಟನೆಯಲ್ಲಿ ಸಂತ್ರಸ್ತೆ ಎನ್ನಲಾಗಿರುವ ಅಪ್ರಾಪ್ತ ಬಾಲಕಿಯ ಹೆತ್ತವರನ್ನು ತಮ್ಮ ಮಗಳ ಪಾಲನೆಗಾಗಿ ಕಿತ್ತಾಡುತ್ತಿರುವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಯೆಂದು ದಿವ್ಯಾ ಆರೋಪಿಸಿದ್ದಾರೆ. ತನ್ನ ಮಗಳನ್ನು ತನ್ನ ವಶಕ್ಕೆ ಪಡೆಯಲು ಅಪ್ರಾಪ್ತ ಬಾಲಕಿಯ ತಂದೆ ಪರ್ಲ್​ ನನ್ನು ಬಳಸಿಕೊಂಡಿದ್ದಾನೆ ಎಂದು ದಿವ್ಯಾ ದೂರಿದ್ದಾರೆ.

ಈ ಆರೋಪದಿಂದ ಪರ್ಲ್​ ಮುಕ್ತನಾಗಿ ಬಂದು ಅವನ ವೃತ್ತಿ ಜೀವನ ಮತ್ತೆ ಹಳಿಗೆ ಮರಳುವ ಸಾಧ್ಯತೆ ಬಗ್ಗೆಯೂ ದಿವ್ಯಾ ವಿವರಿಸಿದ್ದಾರೆ. ಪರ್ಲ್ ಕಿರುತೆರೆ ನಟನಾಗಿ 2013 ರಲ್ಲಿ ದಿಲ್ ಕಿ ನಜರ್ ಸೆ ಖೂಬ್‌ಸುರತ್ ಕಾರ್ಯಕ್ರಮದ ಮೂಲಕ ನಟನಾ ಜೀವನ ಪ್ರಾರಂಭಿಸಿದರು. ಏಕ್ತಾ ಕಪೂರ್ ಅವರ ನಾಗಿನ್ 3 ಧಾರಾವಾಹಿ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಅವರ ಕೊನೆಯ ಟಿವಿ ಸರಣಿ ಬ್ರಹ್ಮರಾಕ್ಷಸ್ 2.

ಬಾಲಕಿ ಐದು ವರ್ಷದವಳಿದ್ದಾಗ ಅಂದ್ರೆ 2019 ರಲ್ಲಿ ಏಕ್ತಾ ಕಪೂರ್ ನಿರ್ಮಿಸಿದ ಶೋ ಬೆಪನಾ ಪ್ಯಾರ್ ಚಿತ್ರದ ಸೆಟ್‌ಗಳಲ್ಲಿ ಆಕೆ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗ್ತಿದೆ. ಈ ಸಂಬಂಧ ಪುರಿಯನ್ನು ಜೂನ್ 4 ರಂದು ಬಂಧಿಸಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪರ್ಲ್​ ವಿ ಪುರಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.