ETV Bharat / sitara

ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ರ್‍ಯಾಂಪ್​ ವಾಕ್​​ ಮಾಡಿದ ನಟಿ ಐಶ್ವರ್ಯ ರೈ

author img

By

Published : Oct 4, 2021, 3:53 PM IST

Updated : Oct 4, 2021, 4:06 PM IST

ಕೊರೊನಾದಿಂದ ಕಳೆದ 2 ವರ್ಷದಿಂದ ನಿಲ್ಲಿಸಲಾಗಿದ್ದ ಪ್ಯಾರಿಸ್​ ಫ್ಯಾಷನ್​ ವೀಕ್​ಗೆ ಮತ್ತೆ ಚಾಲನೆ ಸಿಕ್ಕಿದೆ. ಕೊರೊನಾ ತಗ್ಗಿದ್ದರಿಂದ ಬಾಲಿವುಡ್​ ಹಾಗೂ ಬಾಲಿವುಡ್​ ನಟಿಮಣಿಯರು ಸೇರಿಕೊಂಡು ಈ ಫ್ಯಾಷನ್​ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದರು.

Paris Fashion Week: Aishwarya Rai lives 'deja vu' moment after two years - video

ಪ್ಯಾರಿಸ್ (ಫ್ರಾನ್ಸ್): ಎಲ್ 'ಓರಿಯಲ್ ರನ್ವೇ ಶೋನ 50ನೇ ವಾರ್ಷಿಕೋತ್ಸವದ ನಿಮಿತ್ತ ಇಲ್ಲಿ ಆಯೋಜಿಸಲಾಗಿದ್ದ ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಶ್ವೇತ ವಸ್ತ್ರ ಧರಿಸಿ ಮಿಂಚು ಹರಿಸಿದರು. ನಟಿಯ ಜೊತೆ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಸಹ ಇದ್ದರು.

ಹಾಲಿವುಡ್​ ನಟಿಯರೊಂದಿಗೆ ಐಶ್ವರ್ಯ ರೈ ಬಚ್ಚನ್

ಭಾನುವಾರ ನಡೆದ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ವಿವಿಧ ದೇಶದ ಪ್ರಸಿದ್ಧ ನಟಿಯರ ಜೊತೆ 47 ವರ್ಷದ ಐಶ್ವರ್ಯ ರೈ ರ್‍ಯಾಂಪ್​ ವಾಕ್​​ ಮಾಡಿ ಗಮನ ಸೆಳೆದರು. ಈ ಇವೆಂಟ್‌ನ ಫೋಟೋಗಳನ್ನು ನಟಿಯು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ವಿದೇಶಿ ನೆಲದಲ್ಲಿ ಬಿಳಿ ಬಟ್ಟೆ ತೊಟ್ಟು ರ್‍ಯಾಂಪ್​ ವಾಕ್ ಮಾಡುತ್ತಿರುವ ನಟಿಯ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ. ಫೋಟೋ ಹಾಗೂ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ಐಶ್ವರ್ಯ ರೈ ಬಚ್ಚನ್

ಐಫೆಲ್ ಟವರ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಈ​ ಫ್ಯಾಷನ್​ ವೀಕ್​ನಲ್ಲಿ ವಿವಿಧ ದೇಶಗಳ ನಟಿಮಣಿಯರು ಕುಣಿದ ಎಂಜಾಯ್​ ಮಾಡಿದರು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಈ ಫ್ಯಾಷನ್​ ವೀಕ್​​ ನಿಲ್ಲಿಸಲಾಗಿತ್ತು. ಕೊರೊನಾ ಪ್ರಮಾಣ ತಗ್ಗಿದ್ದರಿಂದ ಈ ಸಾರಿ ಮತ್ತೆ ಫ್ಯಾಷನ್​ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಐಶ್ವರ್ಯ ರೈ, ಎರಡು ವರ್ಷಗಳ ನಂತರ ಇಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಯಾವುದೋ ಒಂದು ಶಕ್ತಿಯ ಆಶೀರ್ವಾದಿಂದ ನಾವು ಇಲ್ಲಿ ಮತ್ತೆ ಒಂದಾಗಿದ್ದೇವೆ. ಇದು ಮಹಿಳೆಯರಿಗೆ ಮತ್ತು ಅವರ ಸಬಲೀಕರಣಕ್ಕಾಗಿ ನಡೆಸುತ್ತಿರುವ ಹಬ್ಬವಾಗಿದೆ.

ಎಲ್ಲರ ಪ್ರಾರ್ಥನೆಯಿಂದ ಜಗತ್ತು ಇಂದು ಸಂಕಷ್ಟದಿಂದ ಹೊರ ಬರುತ್ತಿದೆ. ದೇವರ ಆಶೀರ್ವಾದ ಎಲ್ಲರ ಮೇಲಿರಲಿ. ನಿಮ್ಮ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಐಶ್ವರ್ಯ ರೈ ಬಚ್ಚನ್

Last Updated : Oct 4, 2021, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.