ವಿಶ್ವಸಂಸ್ಥೆಯ ಯುನಿಸೆಫ್ ಸೌಹಾರ್ದತೆಯ ರಾಯಭಾರಿ ಹುದ್ದೆಯಿಂದ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕೈಬಿಡುವಂತೆ ಪಾಕ್ ನಟಿ ಅರ್ಮೀನ್ ಖಾನ್ ಒತ್ತಾಯಿಸಿದ್ದಾರೆ.
ಈ ಕುರಿತು UNICEF ಗೆ ಪತ್ರ ಬರೆದಿರುವ ಅರ್ಮೀನ್ ಹಾಗೂ ಅವರ ಪತಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಟ್ವೀಟ್ ಮೂಲಕ ಪಾಕ್ ಮೇಲೆ ಯುದ್ಧಕ್ಕೆ ಉತ್ತೇಜನ ನೀಡಿದ್ದಾರೆ. ಆದ್ದರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದಾರೆ. ಈ ಪತ್ರವನ್ನು ತಮ್ಮ ಟ್ವಿಟ್ಟರ್ಲ್ಲಿ ಹಂಚಿಕೊಂಡಿದ್ದಾರೆ.
-
An open letter to #UNICEF #Kashmir #Priyanka #Pakistan pic.twitter.com/8yIC6HQUCJ
— Armeena Khan (@ArmeenaRK) August 12, 2019 " class="align-text-top noRightClick twitterSection" data="
">An open letter to #UNICEF #Kashmir #Priyanka #Pakistan pic.twitter.com/8yIC6HQUCJ
— Armeena Khan (@ArmeenaRK) August 12, 2019An open letter to #UNICEF #Kashmir #Priyanka #Pakistan pic.twitter.com/8yIC6HQUCJ
— Armeena Khan (@ArmeenaRK) August 12, 2019
ಇನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಪುಲ್ವಾಮಾ ದಾಳಿ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ಏರ್ ಸ್ಟ್ರೈಕ್ ನಡೆಸಿದ ಭಾರತೀಯ ಸೇನೆಗೆ ಪ್ರಿಯಾಂಕಾ ಟ್ವೀಟ್ ಮಾಡಿ ಅಭಿನಂದಿಸಿದ್ದರು. ಪಿಗ್ಗಿಯ ಈ ನಡೆ ಖಂಡಿಸಿದ ಕೆಲವರು ವಿಶ್ವಸಂಸ್ಥೆಯ ಸೌಹಾರ್ದತೆಯ ರಾಯಭಾರಿ ಹುದ್ದೆಯಿಂದ ಅವರನ್ನು ಕೈ ಬಿಡಬೇಕೆಂದು ಒತ್ತಾಯಿಸಿದ್ದರು.
ಇತ್ತೀಚಿಗಷ್ಟೇ ಪಾಕ್ ಮೂಲದ ಯುವತಿವೋರ್ವಳು ಪಿಗ್ಗಿಯ ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 'ವಿಶ್ವಸಂಸ್ಥೆಯ ಸೌಹಾರ್ದತೆಯ ರಾಯಭಾರಿ ಆಗಿರುವ ನೀವು ಪಾಕ್ ಮೇಲೆ ನ್ಯೂಕ್ಲಿಯರ್ ದಾಳಿ ಬಯಸುತ್ತಿದ್ದೀರಿ. ನಮ್ಮ ದೇಶದಲ್ಲಿಯೂ ನಿಮ್ಮ ಅಭಿಮಾನಿಗಳಿದ್ದಾರೆ' ಎಂದಿದ್ದಳು. ಇದಕ್ಕೆ ಉತ್ತರಿಸಿದ್ದ ಕೃಷ್ಣಸುಂದರಿ ಪ್ರಿಯಾಂಕಾ, ನೀವು ಹೇಳುವುದು ನಂಗೆ ಕೇಳಿಸಿತು. ಪಾಕ್ನಲ್ಲಿ ನನಗೆ ತುಂಬಾ ಅಭಿಮಾನಿಗಳಿದ್ದಾರೆ. ಯುದ್ಧದಿಂದ ನಾವು ಏನನ್ನೂ ಪಡೆಯಲು ಸಾಧ್ಯವಿಲ್ಲ. ಆದರೆ, ನಾನು ಭಾರತೀಯಳು. ನಾನು ದೇಶಭಕ್ತೆ, ಆದ್ದರಿಂದ ನಮ್ಮ ಸೈನಿಕರಿಗೆ ಧನ್ಯವಾದ ಹೇಳಿದ್ದೆ ಎಂದು ಪಾಕ್ ಯುವತಿಯ ಬಾಯಿ ಮುಚ್ಚಿಸಿದ್ದರು.
ಸದ್ಯ ಅರ್ಮೀನ್ ಟ್ವೀಟ್ಗೆ ಕೆಲವರು ಟೀಕೆ ಮಾಡಿದ್ದಾರೆ. ನೀವು ಫೇಮಸ್ ಆಗುವ ಉದ್ದೇಶದಿಂದ ಸೂಪರ್ ಸ್ಟಾರ್ ಪ್ರಿಯಾಂಕಾ ಅವರನ್ನು ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.